ಕಾಶಿ ಶೆಟ್ಟಿ ಸ್ಮರಣಾರ್ಥ ಅಶಕ್ತ ಕುಟುಂಬಕ್ಕೆ ಮುಂಡಾಜೆಯಲ್ಲಿ ʼಕಾಶಿ ಸದನʼ ಮನೆ ಹಸ್ತಾಂತರ

0
Screenshot

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ ಗೌರವ ಮಾರ್ಗದರ್ಶಕರಾದ ಶಶಿಧರ್‌ ಶೆಟ್ಟಿ ಬರೋಡರವರು ತಾಯಿ ಕಾಶಿ ಶೆಟ್ಟಿ ಸ್ಮರಣಾರ್ಥ ಬಂಟ ಸಮುದಾಯದ ಅಶಕ್ತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ವಸತಿ ಯೋಜನೆಯಡಿ ಮನೆ ನೀಡುವ ಮಹತ್‌ ಕಾರ್ಯ ಹಮ್ಮಿಕೊಂಡಿದ್ದು, ಈಗಾಗಲೇ 9 ವಲಯಗಳಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಇದರಲ್ಲಿ ಮುಂಡಾಜೆ ಬಂಟರ ವಲಯ ಸಮಿತಿಯು ಮಂಜುಶ್ರೀ ನಗರದಲ್ಲಿ ರಮೇಶ್‌ ಶೆಟ್ಟಿಯವರಿಗೆ ನಿರ್ಮಾಣ ಮಾಡಿ ಕೊಟ್ಟಿರುವ ನೂತನ ಕಾಶಿ ಸದನ ಮನೆಯ ಗೃಹಪ್ರವೇಶ ಹಾಗೂ ಹಸ್ತಾಂತರ ಕಾರ್ಯ ಜೂ.28ರಂದು ನೆರವೇರಿತು.

ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು, ರಮೇಶ್‌ ಶೆಟ್ಟಿ ಕುಟುಂಬಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here