ಪುದುವೆಟ್ಟು: ಧರ್ಮಸ್ಥಳ ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ‘ನೇಜಿ ನಾಟಿ ಪ್ರಾತ್ಯಕ್ಷಿಕೆ’ ಕಾರ್ಯಕ್ರಮ

0

ಪುದುವೆಟ್ಟು: ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶಾಲೆಯ ಕೃಷಿ ಸಂಘದ ಸಹಯೋಗದೊಂದಿಗೆ ‘ನೇಜಿ ನಾಟಿ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಜೂ.27ರಂದು ಆಯೋಜಿಸಲಾಯಿತು.

ಪುದುವೆಟ್ಟಿನ ಗಂಗಾಧರ ಗೌಡ, ಮಠ ಅವರ ಗದ್ದೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ನೇಜಿ ನಾಟಿ ಮಾಡುವ ವಿಧಾನವನ್ನು ಕಣ್ಣಾರೆ ಕಂಡು, ತಾವೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಆಧುನಿಕ ಶಿಕ್ಷಣದ ಜೊತೆಗೆ ಕೃಷಿ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಮತ್ತು ಮಣ್ಣಿನೊಂದಿಗೆ ನಂಟನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದ ನೇತೃತ್ವವನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡ ಮತ್ತು ಕೃಷಿ ಸಂಘದ ಮಾರ್ಗದರ್ಶಿ ಶಿಕ್ಷಕಿ ತೇಜಾವತಿ ಅವರು ವಹಿಸಿದ್ದರು. ಗಂಗಾಧರ ಗೌಡ ಮತ್ತು ಕುಟುಂಬ ಸದಸ್ಯರು ಹಾಗೂ ಶಾಲೆಯ ಎಲ್ಲ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನೇಜಿ ನಾಟಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವ, ಶ್ರಮದ ಗೌರವ ಹಾಗೂ ಆಹಾರೋತ್ಪಾದನೆಯ ಸವಾಲುಗಳ ಬಗ್ಗೆ ಪ್ರಾಯೋಗಿಕ ಜ್ಞಾನ ದೊರೆತಂತಾಗಿದೆ.

LEAVE A REPLY

Please enter your comment!
Please enter your name here