






ಉಜಿರೆ: ರೋಟರಿ ಕ್ಲಬ್ ಉಜಿರೆ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ, ಗ್ರಾಮ ಪಂಚಾಯತ್ ಉಜಿರೆ, ಬೆನಕ ಈವೆಂಟ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿರುವ ಮೂರು ದಿನಗಳ ಹಲಸು ಮತ್ತು ಹಣ್ಣು ಮೇಳದ ಎರಡನೇ ದಿನವಾದ ಇಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಬಳಿಯ ಶ್ರೀ ಕೃಷ್ಣಾನುಗ್ರಹ ಕಲ್ಯಾಣ ಮಂಟಪದಲ್ಲಿ ಜನ ಜಾತ್ರೆಯಂತೆ ಸೇರಿದರು.
ಜೂ. 26 ರಿಂದ ಜೂ. 28 ರವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9.30 ರವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ನೂರಾರು ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ.
ಮೇಳದ ವಿಶೇಷ ಆಕರ್ಷಣೆಗಳು: ಹಲಸಿನ ಖಾದ್ಯಗಳು: ಹಲಸಿನ ಹಣ್ಣಿನ ಜಿಲೇಬಿ, ಹೋಳಿಗೆ ವಿಶೇಷ ಬೇಡಿಕೆ ಪಡೆಯುತ್ತಿದೆ.
ವೈವಿಧ್ಯಮಯ ಮಳಿಗೆಗಳು: ಹಣ್ಣಿನ ಬಗೆ ಬಗೆಯ ಐಸ್ಕ್ರೀಮ್, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು ಲಭ್ಯ.
ಕೃಷಿ ಪ್ರಿಯರಿಗೆ: ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ಮಾರಾಟಕ್ಕಿವೆ.
ರಾಜ್ಯದಾದ್ಯಂತ ಮಾರಾಟಗಾರರು: ಮೇಳದ ಮೆರುಗು ಹೆಚ್ಚಿಸಲು ರಾಜ್ಯದ ವಿವಿಧ ಭಾಗಗಳಿಂದ ಉತ್ಪನ್ನಗಳು ಹಾಗೂ ವಿಶೇಷ ಮಾರಾಟಗಾರರು ಆಗಮಿಸಿದ್ದಾರೆ.


ವಾಟ್ಸಾಪ್ ಸ್ಟೇಟಸ್ ಸ್ಪರ್ಧೆ: ಮೇಳದಲ್ಲಿ ಸೆಲ್ಫಿ ಸ್ಟಾಂಡ್ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿ ಅತೀ ಹೆಚ್ಚು ವೀಕ್ಷಣೆ ಪಡೆದ 3 ಜನರಿಗೆ ಗುಣಮಟ್ಟದ ಇಳ್ ಕಲ್ ಸೀರೆ ಬಹುಮಾನ ನೀಡಲಾಗುತ್ತಿದೆ. ವೀಕ್ಷಣೆಗೊಂಡ ಸ್ಟೇಟಸ್ ಸ್ಕ್ರೀನ್ಶಾಟ್ ಅನ್ನು 8105279767 ಸಂಖ್ಯೆಗೆ ಕಳುಹಿಸಬೇಕು.
ಬಟ್ಟೆ, ಗೃಹೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ₹20/- ರೂಪಾಯಿಯಿಂದ ವಸ್ತುಗಳು ಲಭ್ಯವಿದ್ದು, ಮೇಳಕ್ಕೆ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವಯೋಮಾನದವರು ಕುಟುಂಬ ಸಮೇತರಾಗಿ ಆಗಮಿಸಿ ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಕೋರಿದ್ದಾರೆ.









