







ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅನಧಿಕೃತ ಅಂಗಡಿ ಮುಂಗಟ್ಟು ಗಳನ್ನು ತೆರವುಗೊಳಿಸುವ ವಿಚಾರದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಉಪಆಯುಕ್ತರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಕ್ಕಡ ನಿವಾಸಿಗಳಾದ ದಯನೀಶ್ ಹಾಗೂ ಪ್ರಶಾಂತ್ ಪೂವಾಜೆ ಎಂಬವರು ಸಲ್ಲಿಸಿರುವ ಎರಡು ಪ್ರತ್ಯೇಕ ದೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿ ನಿಯಮಾನುಸಾರ ಸೂಕ್ತಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡುವಂತೆ ಧಾರ್ಮಿಕದತ್ತಿ ಇಲಾಖೆಯ ಉಪ ಆಯುಕ್ತರು ದ.ಕ.ಜಿಲ್ಲಾಧಿಕಾರಿಯವರಿಗೆ ಆದೇಶಿಸಿದ್ದಾರೆ.
ಕೊಕ್ಕಡ ನಿವಾಸಿ ದಯನೀಶ್ ಬಿನ್ ನಾರಾಯಣ ಗೌಡ ಎಂಬವರು ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಬರುವ ಆದಾಯವನ್ನು ಆರ್ಎಸ್ಎಸ್ ಸಂಘಟನೆ ಟ್ರಸ್ ನವರು ಅಕ್ರಮವಾಗಿ ಪಡೆಯುತ್ತಿರುವುದಾಗಿ ಆರೋಪಿಸಿ ಹಾಗೂ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಪರಿಶೀಲಿಸಿ ನಿಯಮಾನುಸಾರಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡುವಂತೆಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ದ.ಕ.ಜಿಲ್ಲಾಧಿಕಾರಿಯವರಿಗೆ ಜೂ.6ರಂದುಆದೇಶಿಸಿದ್ದಾರೆ.
ಕೊಕ್ಕಡ ನಿವಾಸಿ, ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ಪೂವಾಜೆ ಅವರು, ದೇವಸ್ಥಾನದ ಸ್ಥಿರ ಆಸ್ತಿಯಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಇಲಾಖೆಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಈ ಹಿಂದೆ ದೇವಸ್ಥಾನದ ಆಡಳಿತ ಮಂಡಳಿಯು ನೋಟಿಸ್ ನೀಡಿ ಈ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದ್ದರೂ, ಮತ್ತೆ ಅದೇ ಜಾಗದಲ್ಲಿ ಕಾನೂನು ಬಾಹಿರವಾಗಿ ವ್ಯಾಪಾರ ಪುನರಾರಂಭಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ವಿಷಯವನ್ನು ತಕ್ಷಣವೇ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಹಾಗೂ ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಹಿಂಬರಹ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ದ.ಕ.ಜಿಲ್ಲಾಧಿಕಾರಿಯವರಿಗೆ ಜೂ.17ರಂದು ಆದೇಶಿಸಿದ್ದಾರೆ. ಎರಡೂ ದೂರಿನ ಆದೇಶದ ಪ್ರತಿಯನ್ನು ಸೌತಡ್ಕ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಕಳುಹಿಸಲಾಗಿದೆ.ಅಂಗಡಿಗಳಿಂದಾಗಿ ಪಾರ್ಕಿಂಗ್ ಸಮಸ್ಯೆ; ಸೌತಡ್ಕ ಶ್ರೀ ಮಹಾಗಣಪತಿ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಿದ್ದಾಗ ದೇವಸ್ಥಾನದ ಎದುರು ಭಾಗದಲ್ಲಿರುವ ಅಂಗಡಿಗಳಿಂದಾಗಿ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಈ ಹಿಂದೆ ವರದಿ ಪ್ರಕಟಿಸಲಾಗಿತ್ತು.


ದೇವಸ್ಥಾನದ ಎದುರು ಭಾಗದ ಬಲ ಬದಿಯಲ್ಲಿ 2009ರಿಂದ 10ಕ್ಕಿಂತಲೂ ಹೆಚ್ಚು ಅಂಗಡಿಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗಲೂ ಅಲ್ಲಿ ವ್ಯಾಪಾರ ಚಟುವಟಿಕೆ ನಡೆಯುತ್ತಿದೆ. ಆದರೆ 2026ರ ಮಾರ್ಚ್ ತಿಂಗಳಿಂದ ಈ ಅಂಗಡಿ ಸಾಲುಗಳ ಎದುರು ಭಾಗದಲ್ಲೇ ಏಳೆಂಟು ಅಂಗಡಿಗಳು ಮತ್ತೆ ಹೊಸದಾಗಿ ನಿರ್ಮಾಣಗೊಂಡಿವೆ. ಸುಬ್ರಹ್ಮಣ್ಯ ಶಬರಾಯ ಅವರ ನೇತೃತ್ವದ ಹಾಲಿ ವ್ಯವಸ್ಥಾಪನಾ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಈ ಅಂಗಡಿಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಾಲಿ ವ್ಯವಸ್ಥಾಪನಾ ಸಮಿತಿಯವರು ಹೇಳುವ ಪ್ರಕಾರ, ಮಾರ್ಚ್ ತಿಂಗಳಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನಿನಲ್ಲಿ ಅಂಗಡಿ ನಿರ್ಮಾಣಕ್ಕೆ ಅವಕಾಶಮಾಡಿಕೊಟ್ಟಿದ್ದು, ಅವರು ದಿನಕ್ಕೆರೂ. 100ರಂತೆ ತಿಂಗಳಿಗೆ ರೂ. 3000 ಬಾಡಿಗೆ ನೀಡುತ್ತಿದ್ದಾರೆ. 2009ರಲ್ಲಿ ಅಂಗಡಿಗಳನ್ನು ಕಟ್ಟಿಕೊಂಡುವ್ಯಾಪಾರ ನಡೆಸುತ್ತಿರುವವರು ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಗೆ ಬಾಡಿಗೆ ಸಂದಾಯ ಮಾಡುತ್ತಿದ್ದಾರೆ. ಇದು ದೇವಸ್ಥಾನದ ಖರ್ಚು-ವೆಚ್ಚಗಳಿಗೆ ಬಳಕೆಯಾಗುತ್ತಿಲ್ಲ.
ಈ ಜಮೀನು ದೇವಸ್ಥಾನಕ್ಕೆ ಸೇರಬೇಕು ಮತ್ತು ಬಾಡಿಗೆ ಹಣವೂ ದೇವಸ್ಥಾನಕ್ಕೆ ಸೇರಬೇಕು ಎನ್ನುವುದು ಹಾಲಿ ವ್ಯವಸ್ಥಾಪನಾ ಸಮಿತಿಯ ಪ್ರತಿಪಾದನೆಯಾಗಿದೆ. ಸೌತಡ್ಡಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟ್ರಾಫಿಕ್ ದಟ್ಟಣೆ ವಿಪರೀತಗೊಂಡು ಪ್ರವಾಸಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನ ಪಾರ್ಕಿಂಗ್ ಗೆಂದು ನಿಗದಿಯಾದ ಸ್ಥಳದಲ್ಲಿ ಪಾರ್ಕಿಂಗ್ ಗೆಸ್ಥಳಾವಕಾಶ ಇಲ್ಲದೇ 1 ಮೈಲು ರಸ್ತೆಯುದ್ದಕ್ಕೂ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಸಂಚಾರ ದಟ್ಟಣೆಗೆ ಅಂಗಡಿಗಳ ಸ್ಥಳಾಂತರವೇ ಪರಿಹಾರ ಎಂಬ ಮಾತು ಕೇಳಿಬರುತ್ತಿದೆ. ಈ ಸಮಸ್ಯೆಯನ್ನು ಆದಷ್ಟೂ ಬೇಗ ಪರಿಹರಿಸಬೇಕೆಂಬುದು ಭಕ್ತರ ಒತ್ತಾಯವಾಗಿದೆ.ದೇವಸ್ಥಾನಕ್ಕೆ ಬಾಡಿಗೆ ನೀಡುತ್ತಿದ್ದಾರೆ; ವ್ಯವಸ್ಥಾಪನಾ ಸಮಿತಿ ಅನುಮತಿ ನೀಡಿ ಅಂಗಡಿ ನಿರ್ಮಾಣ ಮಾಡಿದವರು ದೇವಸ್ಥಾನಕ್ಕೆ ಬಾಡಿಗೆ ನೀಡುತ್ತಿದ್ದಾರೆ. ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ಗೆ ಬಾಡಿಗೆ ನೀಡುತ್ತಿರುವ ಅಂಗಡಿಗಳಿರುವ ಜಾಗ ದೇವಸ್ಥಾನಕ್ಕೆ ಸೇರಬೇಕು. ಹಳೆ ಅಂಗಡಿಗಳು ಅಲ್ಲಿಂದ ತೆರವುಗೊಳ್ಳಬೇಕು ಎಂದು ಈ ಹಿಂದೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರು ಅಂಗಡಿ ಮಾಲೀಕರಿಗೆ ನೊಟೀಸ್ ಜಾರಿ ಮಾಡಿದ್ದರು. ಎಲ್ಲಾ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದೇ ಸೂಕ್ತ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷಸುಬ್ರಹ್ಮಣ್ಯ ಶಬರಾಯ ಅವರು ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಆದೇಶ ಬಂದಿಲ್ಲ ಈ ಅಂಗಡಿಗಳು ತೆರವಿಗೆ ಸಂಬಂಧಿಸಿದಂತೆ ಯೇಸುರಾಜ್ ವಿವಾದ 1 ತಿಂಗಳೊಳಗೆ ಬಗೆಹರಿಯಲಿದೆಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿರುವ ಅನಧಿಕೃತ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್ ‘ಸುದ್ದಿ’ಗೆ ತಿಳಿಸಿದ್ದಾರೆ. ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಗೆ ಸಂಬಂಧಿಸಿದ ವಿಚಾರ ಕೋರ್ಟ್ನಲ್ಲಿದೆ. ಹಾಲಿ ವ್ಯವಸ್ಥಾಪನಾ ಸಮಿತಿಯವರು ಅವಕಾಶ ಮಾಡಿಕೊಟ್ಟಿರುವ ಅಂಗಡಿಗಳ ವಿಚಾರಕ್ಕೆ ಸಂಬಂಧಿಸಿ ಮಾರ್ಗದರ್ಶನ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದರೆ ಅವರಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಯೇಸುರಾಜ್ ತಿಳಿಸಿದ್ದಾರೆ.
ಟ್ರಸ್ಟ್ ರದ್ದತಿಗೆ ಕ್ರಮ;ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ರದ್ದತಿಗೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ಜಿಲ್ಲಾಧಿಕಾರಿಯವರಿಗೆ ಆದೇಶ ಆಗಿದೆ. ಜಿಲ್ಲಾಧಿಕಾರಿಯವರ ಸೂಚನೆಯಂತೆ ಸಹಾಯಕ ಆಯುಕ್ತರು ಬೆಳ್ತಂಗಡಿ ಉಪನೋಂದಣಾಧಿಕಾರಿಯವರ ಮೂಲಕ ಟ್ರಸ್ಟ್ ರದ್ದು ಮಾಡಲು ಕ್ರಮ ಕೈಗೊಳ್ಳುವಂತೆ ನಮಗೆ ಪತ್ರ ನೀಡಿದ್ದಾರೆ. ಅದರಂತೆ ಉಪನೋಂದಣಾಧಿಕಾರಿಯವರಿಗೆ ಪತ್ರ ಬರೆದು ಕೇಳಿಕೊಂಡಿದ್ದೆವು. ನಮಗೆ ಅಧಿಕಾರ ಇಲ್ಲ. ಎಲ್ಲಿ ನೋಂದಾವಣೆ ಮಾಡಿದ್ದಾರೆಯೋ ಅವರಿಂದಲೇ ರದ್ದುಮಾಡಿಸಬೇಕು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪನೋಂದಣಾಧಿಕಾರಿ ಕಚೇರಿಯಿಂದ ರಿಪೈ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು, ಜಿಲ್ಲಾ ನೋಂದಾವಣಾಧಿಕಾರಿಗಳ ಮೂಲಕ ಟ್ರಸ್ಟ್ ರದ್ದುಗೊಳಿಸಲು ಕೇಳಿಕೊಳ್ಳುತ್ತೇವೆ. ಟ್ರಸ್ಟ್ ರದ್ದುಗೊಂಡ ಕೂಡಲೇ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸುತ್ತೇವೆ. ನಾವು ಈಗಿನ ಸಮಿತಿಯವರ ಪರವಾಗಿಯೂ ಇಲ್ಲ, ಟ್ರಸ್ಟ್ನವರ ಪರವಾಗಿಯೂ ಇಲ್ಲ. ಸರಕಾರದ ನಿಯಮದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಯೇಸುರಾಜ್ ತಿಳಿಸಿದ್ದಾರೆ









