ಧರ್ಮಸ್ಥಳ: ಅಸ್ವಸ್ಥಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವೃದ್ಧ ಸಾವು; ವಾರಸುದಾರರ ಪತ್ತೆಗೆ ಮನವಿ

0

ಬೆಳ್ತಂಗಡಿ: ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಬಳಿ ರಸ್ತೆ ಬದಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 60-65 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರ ವಾರಸುದಾರರ ಪತ್ತೆಗಾಗಿ ಧರ್ಮಸ್ಥಳ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

​ಘಟನೆಯ ವಿವರ:

ಕಳೆದ ಜೂನ್ 14, 2026 ರಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಣ್ಣಪ್ಪ ಬೆಟ್ಟದ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ವೃದ್ಧರೊಬ್ಬರು ಯಾವುದೋ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 25, 2026 ರಂದು ಬೆಳಿಗ್ಗೆ 11:30 ಗಂಟೆಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

​ಮೃತರ ಚಹರೆ ಮತ್ತು ಗುರುತುಗಳು:

  • ​ವಯಸ್ಸು: ಸುಮಾರು 60 ರಿಂದ 65 ವರ್ಷ.
  • ​ಎತ್ತರ ಮತ್ತು ಶರೀರ: 5.3 ಅಡಿ ಎತ್ತರ, ಸಪೂರ ಶರೀರ.
  • ​ಮೈಬಣ್ಣ ಮತ್ತು ಮುಖ: ಎಣ್ಣೆಕಪ್ಪು ಮೈಬಣ್ಣ, ಕೋಲುಮುಖ ಹಾಗೂ ಅಗಲ ಹಣೆ.
  • ​ಕೂದಲು ಮತ್ತು ಗಡ್ಡ: ತಲೆಯಲ್ಲಿ ಬಿಳಿ ನೆರೆತ ಕೂದಲು ಹಾಗೂ ಮುಖದಲ್ಲಿ ಬಿಳಿ ನೆರೆತ ಗಡ್ಡ-ಮೀಸೆ ಇರುತ್ತದೆ.
  • ​ವಿಶೇಷ ಗುರುತು: ಹಣೆಯ ಎಡಭಾಗದಲ್ಲಿ (ಎಡಕಣ್ಣಿನ ಮೇಲ್ಭಾಗದಲ್ಲಿ) ಕಪ್ಪು ಎಳ್ಳು ಮಚ್ಚೆಯ ಗುರುತು ಇದೆ.
  • ​ಧರಿಸಿದ್ದ ಉಡುಪು: ಮೃತದೇಹದ ಮೈಮೇಲೆ ಆಸ್ಪತ್ರೆಯ ಬಾಬ್ತು ಡೈಪರ್ ಮತ್ತು ಸೊಂಟದಲ್ಲಿ ಒಂದು ಕೆಂಪು ಉಡಿದಾರ ಇರುತ್ತದೆ.

​ಮೃತರ ವಾರಸುದಾರರು ಅಥವಾ ಇವರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಕ್ಷಣವೇ ಈ ಕೆಳಗಿನ ದೂರವಾಣಿ ಸಂಖ್ಯೆಗಳು ಅಥವಾ ಇಮೇಲ್ ಮೂಲಕ ಸಂಪರ್ಕಿಸಬೇಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

​ಸಂಪರ್ಕ ಮಾಹಿತಿ:

  • ​ಧರ್ಮಸ್ಥಳ ಪೊಲೀಸ್ ಠಾಣೆ: 08256 277253
  • ​ಪಿ.ಎಸ್.ಐ ಧರ್ಮಸ್ಥಳ: 7795424204, 8277986449
  • ​ಸಿ.ಪಿ.ಐ ಬೆಳ್ತಂಗಡಿ: 9480805336
  • ​ಜಿಲ್ಲಾ ನಿಯಂತ್ರಣ ಕೊಠಡಿ (ಮಂಗಳೂರು): 0824-2220500
  • ​ಇಮೇಲ್ ವಿಳಾಸ: [email protected]

LEAVE A REPLY

Please enter your comment!
Please enter your name here