ವಕೀಲರ ಸಂಘದ ಗ್ರಂಥಾಲಯ ಹಾಗೂ ಜನರೇಟರ್ ಉದ್ಘಾಟನಾ ಕಾರ್ಯಕ್ರಮ ವಕೀಲರ ಸಂಘಕ್ಕೆ ಕೈಲಾದಷ್ಟು ಸಹಾಯ ಮಾಡಿರುವ ತೃಪ್ತಿ ಇದೆ : ಪ್ರತಾಪಸಿಂಹ ನಾಯಕ್ ಗ್ರಂಥಾಲಯವನ್ನು ಎಲ್ಲಾ ವಕೀಲರು ಸದುಪಯೋಗ ಪಡಿಸಿಕೊಳ್ಳಬೇಕು : ಬಸವರಾಜ್ ವಕೀಲರ ಸಂಘದ, ವಕೀಲರ ಏಳಿಗೆಗೆ ಶ್ರಮಿಸುತ್ತಿರುವ ಸರ್ವರಿಗೂ ಧನ್ಯವಾದಗಳು : ಅಲೋಶಿಯಸ್ ಎಸ್. ಲೋಬೊ

0

ಬೆಳ್ತಂಗಡಿ: ವಕೀಲರ ಸಂಘದ ಸದಸ್ಯರ ಅನುಕೂಲಕ್ಕಾಗಿ ಸಂಘದ ಹಿರಿಯ ಸದಸ್ಯರಾದ ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಅವರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಂಥಾಲಯ ಮತ್ತು ಜನರೇಟರ್ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮವು ಜೂ.25ರಂದು ವಕೀಲರ ಭವನದಲ್ಲಿ ನಡೆಯಿತು.ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿ, ವಕೀಲರ ಕಷ್ಟ-ಸುಖಗಳ ಜೊತೆಗೆ ಹಾಗೂ ವಕೀಲ ವೃತ್ತಿಯಲ್ಲಿಯೇ ನನ್ನ ಜೀವನದ ಪ್ರಮುಖ ಕ್ಷಣಗಳನ್ನು ಕಳೆದಿರುವುದರಿಂದ ವಕೀಲರಿಗೆ ಹಾಗೂ ವಕೀಲರ ಸಂಘಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಅವರು ಮಾತನಾಡಿ, ನೂತನ ಗ್ರಂಥಾಲಯವನ್ನು ಹಿರಿಯ ಹಾಗೂ ಕಿರಿಯ ವಕೀಲರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ ಮಾತನಾಡಿ, ನೂತನ ನ್ಯಾಯಾಲಯ ನಿರ್ಮಾಣಕ್ಕೆ ಶ್ರಮಿಸುತ್ತಿರುವ, ವಕೀಲರ ಭವನದ ಹಾಗೂ ವಕೀಲರ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಎಲ್ಲಾ ವಕೀಲರರಿಗೆ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಏಳಿಗೆಗೆ ಶ್ರಮಿಸಿದ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಡಿ ಸುಧಾಕರ್ ಅವರನ್ನು ಸ್ಮರಿಸಲಾಯಿತು. ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಗಣೇಶ್ ಲಾಯಿಲ, ಪ್ರತಾಪ್ ಸಿಂಹ ನಾಯಕ್ ಅವರ ಆಪ್ತ ಸಹಾಯಕ ಕಿರಣ್ ರಾಜ್, ಸಂಘದ ಏಳಿಗೆಗಾಗಿ ಶ್ರಮಿಸಿದ ನಿಕಟಪೂರ್ವ ಅಧ್ಯಕ್ಷರಾದ ವಸಂತ ಮರಕಡ ಮತ್ತು ಕಾರ್ಯದರ್ಶಿ ಯಾದ ನವೀನ್ ಬಿ ಕೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆಎಂಎಫ್‌ಸಿಯ ನ್ಯಾಯಾಧೀಶ ಮನು ಬಿ.ಕೆ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿಯ ನ್ಯಾಯಾಧೀಶ ರಾಮಲಿಂಗಪ್ಪ, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿಯ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಮತ್ತು ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಶಿವಕುಮಾರ್ ಎಸ್.ಎಂ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ, ಆಶಿತಾ, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ವಕೀಲರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿರಿಯ ವಕೀಲರ ಸಮಿತಿಯ ಸದಸ್ಯರು, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ವಕೀಲೆ ಪ್ರತೀಕ್ಷಾ ಅವರು ಪ್ರಾರ್ಥಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಅವರು ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕೋಶಾಧಿಕಾರಿ ಮುಮ್ತಾಜ್ ಬೇಗಂ ವಂದಿಸಿದರು. ಹಿರಿಯ ವಕೀಲ ಶೈಲೇಶ್ ಆರ್. ಠೋಸರ್ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಏಳಿಗೆಗಾಗಿ ಶ್ರಮಿಸಿದ ನಿಕಟಪೂರ್ವ ಅಧ್ಯಕ್ಷರಾದ ವಸಂತ ಮರಕಡ ಮತ್ತು ಕಾರ್ಯದರ್ಶಿ ಯಾದ ನವೀನ್ ಬಿ ಕೆ ಇವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here