ಲುಕ್ಕು ಫೋಟೋ ಫ್ರೇಮ್ ನೂತನ ಶಾಖೆ ಶುಭಾರಂಭ

0

ಗುರುವಾಯನಕೆರೆ: ರಸ್ತೆ ಅಗಲೀಕರಣ ಕಾಮಗಾರಿಯಿಂದ ಸ್ಥಳಾಂತರಗೊಂಡಿದ್ದ ಲುಕ್ಕು ಫೋಟೋ ಫ್ರೇಮ್ ಅಂಗಡಿಯು ಸ್ಥಳೀಯ ಕಟ್ಟಡದಲ್ಲಿ ಜೂ.22 ಸೋಮವಾರದಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗಣಹೋಮ ನೆರವೇರಿಸಿ ಬಿಲ್ಡಿಂಗ್ ಮಾಲೀಕರಾದ ಹಿಲರಿ ಪೆರೇರಾ ರಿಬ್ಬನ್ ಕಟ್ ಮಾಡುವ ಮೂಲಕ ದೀಪ ಬೆಳಗಿಸಿ ಅಂಗಡಿ ಯು ನೂತನವಾಗಿ ಶುಭಾರಂಭಗೊಂಡಿತು.

ಅಂಗಡಿಯ ಮಾಲೀಕರಾದ ಜಿ. ಜಗದೀಶ್ ಆಚಾರ್ಯ ಅವರು ಮಾತನಾಡಿ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ದೇವರ ಫೋಟೋಗಳು, ಆಕರ್ಷಕ ಫೋಟೋ ಫ್ರೇಮ್‌ಗಳು, ನವೀನ ವಿನ್ಯಾಸದ ಗಿಫ್ಟ್ ಫೋಟೋಗಳು ಸೇರಿದಂತೆ ಹಲವು ವಸ್ತುಗಳು ಇಲ್ಲಿ ಲಭ್ಯವಿವೆ ಎಂದು ತಿಳಿಸಿದರು.

ಇದಲ್ಲದೆ, ಎಲ್ಲಾ ರೀತಿಯ ಫೋಟೋ ಎಡಿಟಿಂಗ್, ಡಿಜಿಟಲ್ ಡಿಸೈನಿಂಗ್, ಲ್ಯಾಮಿನೇಷನ್ ಹಾಗೂ ಉತ್ತಮ ಗುಣಮಟ್ಟದ ಫೋಟೋ ಪ್ರಿಂಟಿಂಗ್ ಸೇವೆಗಳು ಒಂದೇ ಸೂರಿನಡಿ ಒದಗಿಸಲಾಗುವುದು ಎಂದು ಹೇಳಿದರು

.ಶುಭಾರಂಭ ಸಮಾರಂಭದಲ್ಲಿ ಅಂಗಡಿಯ ಮಾಲೀಕರಾದ ಜಿ. ಜಗದೀಶ್ ಆಚಾರ್ಯ, ಮಲ್ಲಿಕಾ ಹಾಗೂ ಹಲವು ಗಣ್ಯರು, ಬಂಧು-ಬಳಗ ಮತ್ತು ಗ್ರಾಹಕರು ಉಪಸ್ಥಿತರಿದ್ದು ನೂತನ ಅಂಗಡಿಗೆ ಶುಭ ಹಾರೈಸಿದರು

LEAVE A REPLY

Please enter your comment!
Please enter your name here