







ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಕಕ್ಕಿಂಜೆ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡುವ ಪ್ರಮುಖ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಳೆ (ಜೂನ್ 24, ಬುಧವಾರ) ತಾಲೂಕಿನ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ದಿನಪೂರ್ತಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM) ಪ್ರಕಟಣೆಯಲ್ಲಿ ತಿಳಿಸಿದೆ.


110/33/11ಕೆವಿ ಗುರುವಾಯನಕೆರೆ ಉಪಕೇಂದ್ರದಿಂದ ಹೊರಡುವ 33ಕೆವಿ ಕಕ್ಕಿಂಜೆ ಹಾಗೂ 33ಕೆವಿ ಪಿಲಿಕ್ಕಳ ವಿದ್ಯುತ್ ಲೈನ್ಗಳಲ್ಲಿ ತುರ್ತು ದುರಸ್ತಿ ಕೆಲಸಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಫೀಡರ್ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ನಮ್ರವಾಗಿ ವಿನಂತಿಸಿದೆ.
ದಿನಾಂಕ: 24.06.2026 (ಬುಧವಾರ)ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:30 ರವರೆಗೆವಿದ್ಯುತ್ ಕೈಕೊಡುವ ಪ್ರಮುಖ ಫೀಡರ್ಗಳು ಮತ್ತು ಪ್ರದೇಶಗಳು:ಕೈಗಾರಿಕಾ ಸ್ಥಾವರಗಳು 33ಕೆವಿ ಪೆಟ್ರೋನೆಟ್ ಸ್ಥಾವರ ಹಾಗೂ 33 ವಿ HPCL ಸ್ಥಾವರ ಪಿಲಿಕ್ಕಳ ಫೀಡರ್ ರ್ತೋಟತ್ತಾಡಿ, ಚಿಬಿದ್ರೆ, ನೆರಿಯ ಸುತ್ತಮುತ್ತಲ ಪ್ರದೇಶಗಳು, ಚಾರ್ಮಾಡಿ ಫೀಡರ್ ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳು ಮುಂಡಾಜೆ ಫೀಡರ್ ಮುಂಡಾಜೆ ಮತ್ತು ಕಲ್ಮಂಜ ಭಾಗಗಳು ದಿಡುಪೆ ಫೀಡರ್ ಡಿಡುಪೆ ಹಾಗೂ ಕೊಲ್ಲಿ ಸುತ್ತಮುತ್ತಲ ಪರಿಸರಗಳು









