







ಧರ್ಮಸ್ಥಳ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವಿಶ್ವಸಂಖ್ಯಾತ ದಿನಾಚರಣೆಯನ್ನು ಅತ್ಯದ್ಭುತವಾಗಿ ನಡೆಸಲಾಯಿತು. ಅತಿಥಿಗಳಾಗಿ ಆಗಮಿಸಿದ ಧರ್ಮಸ್ಥಳ ದೇವಳದ ಪಾರುಪತ್ಯಗಾರಲಕ್ಷ್ಮಿ ನಾರಾಯಣ ರಾವ್ ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ದಾನಿಗಳು ನೀಡಿದ ತಬಲವನ್ನು ತಬಲ ಗುರು ವಿನಾಯಕ ಬಾಳಿಗ,ಹಾರ್ಮೋನಿಯಂ ಲಕ್ಷ್ಮೀನಾರಾಯಣ ರಾವ್ ಕೀ ಬೋರ್ಡ್ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ನುಡಿಸುವುದರ ಮೂಲಕ ಮುಂಬರುವ ದಿನಗಳಲ್ಲಿ ಪಕ್ಕ ವಾದ್ಯಗಳ ತರಬೇತಿಗಳಿಗೂ ಸಹ ವಿದ್ಯುಕ್ತ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿದ ಅವರುಗಳು ವಿದ್ಯಾರ್ಥಿ ಜೀವನದಲ್ಲಿ ಸಂಗೀತದ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವವನ್ನು, ಓದಿನ ಜೊತೆಗಿನ ಇಂತಹ ಚಟುವಟಿಕೆಗಳು ಆಧುನಿಕ ಜಗತ್ತಿಗೆ ಯಾಕೆ ಬೇಕು ವಿಚಾರಗಳನ್ನು ವಿವರಿಸಿದರು.



ಬಳಿಕ ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ಕೊಳಲು ವಾದನ ಹಾಗೂ ಕೀಬೋರ್ಡ್ ನುಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆ ಮೂಲಕ ವಿಶ್ವ ಸಂಗೀತ ದಿನವನ್ನು ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಲ್ಲಿನಾಥ್ ಜೈನ್, ಶಂಬು ಶಂಕರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ. ವಿ. ಮಾರ್ಗದರ್ಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಂಗೀತ ಸುಧೆಯಲ್ಲಿ ಮಿಂದೆದ್ದರು.









