







ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಖ್ಯಾತ ವಾಗ್ಮಿ ವೀಣಾ ಬನ್ನಂಜೆ ಇವರಿಂದ ಜೂ. 15 ರಿಂದ ಜೂ. 21ರ ವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆದ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹದ ಸಮಾರೋಪ ಸಮಾರಂಭ ಜೂ. 21 ರಂದು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು ವಹಿಸಿದ್ದರು.


ನಿವೃತ್ತ ಪ್ರಾಂಶುಪಾಲ ಪ್ರೊ. ಎ. ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿಯ ಖ್ಯಾತ ವಕೀಲ
ರೋ. ಧನಂಜಯ್ ರಾವ್, ಉಜಿರೆಯ ಉದ್ಯಮಿ ಮಹಾತ್ಮಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್ ಗೌರವ ಉಪಸ್ಥಿತರಿದ್ದು ಪ್ರವಚನದ ಅನುಭವ ಹಂಚಿಕೊಂಡರು.
ಸಮಾಜ ಸೇವಕರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್ ಅಜ್ರಿ, ಜೀವ ವಿಮಾ ಪ್ರತಿನಿಧಿ ಕೆ . ರಮೇಶ್ ಬಂಗೇರ, ನಮಿತಾ ಹರೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದು ವಾರ ಸಂಪೂರ್ಣ ರಾಮಾಯಣ ಪ್ರವಚನ ನೆರವೇರಿಸಿದ ಖ್ಯಾತ ವಾಗ್ಮಿ ವೀಣಾ ಬನ್ನಂಜೆ ಇವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಸಹಕರಿಸಿದ ಬೆಳ್ತಂಗಡಿ ಪಪ್ಪು ಸೌಂಡ್ಸ್ ಮಾಲಕ ಶಬೀರ್, ಕೋಟಿ ಚೆನ್ನಯ್ಯ ಶಾಮಿಯಾನದ ಸುಮನ್ ಇವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಉಪನ್ಯಾಸಕ ಶ್ರೀಶ ಕುಮಾರ್ ಸ್ವಾಗತಿಸಿ ಹಿರಿಯ ವಾಹನ ನೀರಿಕ್ಷಕ ಕೆ. ಚರಣ್ ಕುಮಾರ್ ವಂದಿಸಿದರು. ಸುಧಾಮಣಿ ಆರ್. ಕಾರ್ಯಕ್ರಮ ನಿರೂಪಿಸಿದರು.









