ಕೊರಂಜ  ಸ.ಉ.ಪ್ರಾ. ಶಾಲೆಯಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಡಿಯಾ ಲಿ. ಮತ್ತು ಯೂತ್ ಫಾರ್ ಸೇವಾ ಸಹಯೋಗದಲ್ಲಿ  ಉಚಿತ ಬ್ಯಾಗ್, ನೋಟ್ ಬುಕ್ ಲೇಖನ ಸಾಮಾಗ್ರಿಗಳ ವಿತರಣೆ 

0

ಗೇರುಕಟ್ಟೆ :  ಕೊರಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜೂನ್ 20 ರಂದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಡಿಯಾ ಲಿಮಿಟೆಡ್ ಮತ್ತು ಯೂತ್ ಫಾರ್ ಸೇವಾ ಸಹಯೋಗದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 385 ವಿದ್ಯಾರ್ಥಿಗಳಿಗೆ  ಬ್ಯಾಗ್, ನೋಟ್ ಬುಕ್, ಪೆನ್, ಪೆನ್ಸಿಲ್, ಶಾರ್ಪ್ನರ್, ಕ್ರಯಾನ್ಸ್, , ಕಥೆ ಪುಸ್ತಕ, ಪೌಚ್ ಮುಂತಾದ ವಸ್ತುಗಳನ್ನು ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡಿದರು. 

ಶಾಲಾ ಮಕ್ಕಳಿಗಾಗಿ ಉಚಿತವಾಗಿ ಕ್ರೀಡೋಪಕರಣಗಳನ್ನು  ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು.  ಶಿಕ್ಷಕರಿಗೆ ಕುಡಿಯುವ ನೀರಿನ ಬಾಟಲ್ ಗಳನ್ನು ಸಹ ನೀಡಿದರು.  ಅತಿಥಿಗಳು ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ಮಕ್ಕಳಿರುವುದು ತುಂಬಾ ಸಂತಸದ ಸಂಗತಿ ಹಾಗೂ ಮಕ್ಕಳು ಉತ್ತಮ ಶಿಕ್ಷಣ ಪಡೆದು ಮುಂದೆ ಈ ಶಾಲೆಗೆ ಕೊಡುಗೆ ನೀಡುವ ಮೂಲಕ ಶಾಲೆಯನ್ನು ಇನ್ನೂ ಎತ್ತರಕ್ಕೆ ಬೆಳೆಸಿ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಡಿಯಾ ಲಿಮಿಟೆಡ್  ಮತ್ತು ಯೂತ್ ಫಾರ್ ಸೇವಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಹಾಗೂ ಶಾಲೆಗೆ ಅಗತ್ಯವಿರುವ ಕೆಲವು ಬೇಡಿಕೆಯ ಮನವಿಯನ್ನು  ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್  ಇಂಡಿಯಾ  ಲಿಮಿಟೆಡ್  ಮತ್ತು ಯೂತ್ ಫಾರ್ ಸೇವಾ ಸಂಸ್ಥೆಯ ಪರವಾಗಿ ಆಗಮಿಸಿದ ವ್ಯವಸ್ಥಾಪಕರಾದ  ಶಿಲ್ಪಾ , ಶ್ರೀದೇವಿ ಸದಸ್ಯರಾದ ಆದಿತ್ಯ, ಯದುವೀರ್, ಪಾರ್ಥ್, ರಜತ ಮುಖ್ಯ ಶಿಕ್ಷಕರೊಡಗೂಡಿ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಕ್ಕೆ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸೌಲಭ್ಯ ದೊರೆಯಲು ಕಾರಣೀಕರ್ತರಾದ ಶಾಲೆಯ ಶಿಕ್ಷಕಿ ಮಮತಾ ಕೆ. ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಆಗಬೇಕು ಎಂಬ ಆಶಯದಿಂದ ಮಾಡಿದ ನಿಸ್ವಾರ್ಥ ಕಾರ್ಯವಿದು, ಮಕ್ಕಳ ಒಳಿತಿಗಾಗಿ ಶಿಕ್ಷಕರು ಸದಾ ಸಿದ್ಧ ಎಂದರು.ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್  ಇಂಡಿಯಾ ಲಿಮಿಟೆಡ್ ಮತ್ತು ಯೂತ್ ಫಾರ್ ಸೇವಾ ಸಂಸ್ಥೆ  ಪರವಾಗಿ ಆಗಮಿಸಿದ್ದಂತಹ ಮಹನೀಯರಿಗೆ ಕೃತಜ್ಞತಾರ್ಥ ವಾಗಿ ಶಾಲಾ ಪರವಾಗಿ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕ ಕೃಷ್ಣ ಪ್ರಸಾದ್ ನಿರೂಪಿಸಿ, ಶಿಕ್ಷಕಿ ಅಮಿತಾ ಎ. ಸ್ವಾಗತಿಸಿ, ಶಿಕ್ಷಕಿ ದೀಪ್ತಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here