







ಉಜಿರೆ: ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜೂ.19ರಂದು ಜರಗಿತು.ವಿದ್ಯಾರ್ಥಿಗಳು ಮೊಬೈಲ್ ಇವಿಎಂ ಬಳಸಿ ಮತದಾನ ಮಾಡಿದರು.


ವಿದ್ಯಾರ್ಥಿ ನಾಯಕಿಯಾಗಿ 10ನೇ ತರಗತಿಯ ರಂಸಿನಾ ಬಾನು, ಉಪನಾಯಕನಾಗಿ ವರುಣ್ 9ನೇ ತರಗತಿ ಚುನಾಯಿತರಾದರು.ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕಿರಣ್, ಚುನಾವಣಾ ಅಧಿಕಾರಿಗಳಾದ ಚಂದ್ರಶೇಖರ್ ಭಟ್ ಮತ್ತು ವಿಶ್ವನಾಥ್, ಎಲ್ಲಾ ಶಿಕ್ಷಕರು ಸಹಕರಿಸಿದರು.









