ಉಜಿರೆ: ಜೆಸಿಐ ಸಿಟಿ ಲೇಡಿ ಜೆಸಿ ವಿಂಗ್ಸ್ ವತಿಯಿಂದ ರಕ್ತದಾನ ಜಾಗೃತಿ ಮಾಹಿತಿ ಕಾರ್ಯಗಾರ ಹಾಗೂ ರಕ್ತದಾನಿಗಳಿಗೆ ಗೌರವಾರ್ಪಣೆ

0

ಉಜಿರೆ: ಜೆಸಿಐ ಸಿಟಿ ಲೇಡಿ ಜೆಸಿ ವಿಂಗ್ಸ್ ವತಿಯಿಂದ ‘ರಕ್ತದಾನ ಜಾಗೃತಿ ಮಾಹಿತಿ ಕಾರ್ಯಗಾರ’ ಮತ್ತು ‘ರಕ್ತದಾನಿಗಳಿಗೆ ಗೌರವಾರ್ಪಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕನ್ಯಾಡಿಯ ಸೇವಾ ಭಾರತಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷ ವಿನಾಯಕ ರಾವ್ ಅವರು, ರಕ್ತದಾನದ ಮಹತ್ವ ಮತ್ತು ಸಮಾಜದಲ್ಲಿ ಅದರ ಅಗತ್ಯತೆಯ ಬಗ್ಗೆ ಸವಿವರವಾದ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಮಾದರಿಯಾಗಿ ನಿರಂತರ ರಕ್ತದಾನ ಮಾಡುತ್ತಾ ಬಂದಿರುವ ಇಬ್ಬರು ಸಾಧಕರನ್ನು ಗೌರವಿಸಲಾಯಿತು. 48 ಬಾರಿ ರಕ್ತದಾನ ಮಾಡುವುದರ ಜೊತೆಗೆ, ಹಲವು ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಅವನೀಶ್ ಹಾಗೂ 30ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಉಜಿರೆ ವರ್ತಕರ ಸಂಘದ ಅಧ್ಯಕ್ಷರು ಮತ್ತು ರಮ್ಯಾ 1 ಗ್ರಾಂ ಗೋಲ್ಡ್ ಫ್ಯಾನ್ಸಿಯ ಮಾಲಕರಾದ ಪ್ರಸಾದ್ ಬಿ. ಎಸ್. ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಮೊಹಮ್ಮದ್ ಮಿರ್ಷಾದ್ ಅವರು ವಹಿಸಿದ್ದರು. ವೇದಿಕೆಯಲ್ಲಿ ತರಬೇತಿ ವಿಭಾಗದ ವಲಯ ಸಂಯೋಜಕರಾದ ಜೆಎಫ್‌ಎಮ್ ಆಶಾಲತಾ ಪ್ರಶಾಂತ್, ಘಟಕದ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿ ರಾಜ್ ಹಾಗೂ ಘಟಕದ ಮಹಿಳಾ ಜೆಸಿ ಭಾಗದ ಸಂಯೋಜಕರಾದ ಹೇಮಾವತಿ ಕೆ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here