ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾಲೇಜಿಗೆ ಅನುಮತಿ ಪಡೆದ ಆರೋಪ: ಗುರುವಾಯನಕೆರೆ ಮತ್ತು ವೇಣೂರು ಎಕ್ಸೆಲ್ ಕಾಲೇಜ್‌ನ ಮಾನ್ಯತೆ ರದ್ದು: ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಆದೇಶ

0

ಬೆಳ್ತಂಗಡಿ : ಕಾಲೇಜು ಪ್ರಾರಂಭಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಶಿಕ್ಷಣ ಇಲಾಖೆಯನ್ನು ವಂಚಿಸಿ ಅನುಮತಿ ಪಡೆದುಕೊಳ್ಳಲಾಗಿದೆ. ಹೀಗಾಗಿ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಕಾಲೇಜಿನ ಮಾನ್ಯತೆಯನ್ನು (ಅರಮಲೆಬೆಟ್ಟ ಕ್ಯಾಂಪಸ್) ರದ್ದುಪಡಿಸಬೇಕು ಎಂದು ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಅದೇ ರೀತಿ ವೇಣೂರಿನಲ್ಲಿರುವ ಎಕ್ಸೆಲ್ ಪದವಿಪೂರ್ವ ಕಾಲೇಜು ಕೂಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನುಮತಿ ಪಡೆದುಕೊಂಡಿತ್ತು. ಹಾಗಾಗಿ ಅದರ ಮಾನ್ಯತೆಯನ್ನೂ ರದ್ದುಪಡಿಸಬೇಕು ಎಂದು ಅವರು ಆದೇಶ ಪ್ರಕಟಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮಾನ್ಯತೆಯನ್ನು ಹಿಂಪಡೆದುಕೊಳ್ಳಲಾಗಿದೆ. ಈ ಕಾಲೇಜಿನ ವಿದಾರ್ಥಿಗಳನ್ನು ಸನಿಹದ ಪದವಿಪೂರ್ವ ಕಾಲೇಜುಗಳಿಗೆ ವರ್ಗಾಯಿಸಲು ಜಿಲ್ಲಾ ಉಪ ನಿರ್ದೇಶಕರು ಕ್ರಮ ವಹಿಸಬೇಕು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಈ ಆದೇಶ ಪ್ರತಿಗಳನ್ನು ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರವಾನೆ ಮಾಡಲಾಗಿದೆ. ಈ ಎರಡೂ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಾರದು ಎಂದೂ ಆ ಕಾಲೇಜುಗಳ ಪ್ರಾಂಶುಪಾಲರಿಗೆ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವೇಣೂರಿನಲ್ಲಿರುವ ಹಾಗೂ ಗುರುವಾಯನಕೆರೆಯ ಅರಮಲೆಬೆಟ್ಟ ಕ್ಯಾಂಪಸ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿರದ ಪದವಿಪೂರ್ವ ಕಾಲೇಜುಗಳಿಗೆ ವರ್ಗಾಯಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹಸ್ತಾಂತರಿಸಲು ಸೂಚನೆ ನೀಡಲಾಗಿದೆ. ಈ ಎರಡೂ ಕಾಲೇಜುಗಳ ವಿವರವನ್ನು SಂಖಿS Pಔಖಖಿಂಐನಿಂದ ರದ್ದುಪಡಿಸಬೇಕು ಎಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಇ-ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ದೂರು ನೀಡಿದ್ದು ಯಾರು?: ಬೆಳ್ತಂಗಡಿಯ ಪಾಲಂಗಾಡಿ ಎಂಬಲ್ಲಿನ ಕಲೆಂಜಿರೋಡಿಯ ಶಮಂತ್ ಕುಮಾರ್ ಜೈನ್ ಎಂಬವರು ನೀಡಿದ್ದ ದೂರಿನ ಆಧಾರದ ಮೇಲೆ ಈ ಆದೇಶ ಹೊರಬಿದ್ದಿದೆ.
ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ನಕಲಿ ದಾಖಲೆಗಳನ್ನು ಸೃಜಿಸಿ, ಕಾಲೇಜನ್ನು ಪ್ರಾರಂಭಿಸಲು ಅನುಮತಿ ಪಡೆದಿದ್ದಾರೆ ಎಂದು ಅವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಕಾಲೇಜು ಪ್ರಾರಂಭಿಸುವಾಗ ಸಲ್ಲಿಸಿರುವ ದಾಖಲೆಗಳ ನೈಜತೆಯ ಕುರಿತು ಮಾಹಿತಿ ಒದಗಿಸುವಂತೆ, ವೇಣೂರು ಗ್ರಾಮ ಪಂಚಾಯಿತಿ ಪಿಡಿಒ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಅಗ್ನಿಶಾಮಕಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ ಕಾರ್ಯಪಾಲಕ ಅಭಿಯಂತರರು-ಲೋಕೋಪಯೋಗಿ ಇಲಾಖೆ ಮುಂತಾದ ಕಚೇರಿಗಳನ್ನು ಕೋರಲಾಗಿತ್ತು. ಅದರನ್ವಯ ಸದರಿ ಕಾಲೇಜುಗಳ ಕುರಿತು ಸಂಬಂಧಿಸಿದ ಇಲಾಖೆಯವರು ವರದಿ ನೀಡಿದ್ದರು ಎಂದು ಶಿಕ್ಷಣ ಇಲಾಖೆ ನಿರ್ದೇಶಕರು ತಮ್ಮ ಆದೇಶದಲ್ಲಿ ದಾಖಲು ಮಾಡಿದ್ದಾರೆ.

ವೇಣೂರು ಎಕ್ಸೆಲ್ ಪದವಿಪೂರ್ವ ಕಾಲೇಜು ಹಾಗೂ ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜು (ಅರಮಲೆಬೆಟ್ಟ ಕ್ಯಾಂಪಸ್) ಮಾನ್ಯತೆ ರದ್ದತಿಗೆ ನೀಡಿದ ಕಾರಣಗಳು: ೧. ಎಕ್ಸೆಲ್ ಪದವಿಪೂರ್ವ ಕಾಲೇಜಿಗೆ (ಅರಮಲೆಬೆಟ್ಟ ಕ್ಯಾಂಪಸ್) ಸಂಬಂಧಿಸಿದ ಸದರಿ ಕಟ್ಟಡ ಪೂರ್ಣಗೊಳಿಸಿದ ಪ್ರಮಾಣಪತ್ರ (ಕಂಪ್ಲೀಷನ್ ಸರ್ಟಿಫಿಕೇಟ್), ಎಸ್ಟಿಪಿ (ಕೊಳಚೆ ನೀರು ಸಂಸ್ಕರಣಾ ಯೋಜನೆ) ಹಾಗೂ ಆರ್‌ಡಬ್ಲುಎಚ್ ಪ್ರಮಾಣಪತ್ರಗಳು ನೈಜವಾಗಿಲ್ಲ ಎಂದು ಗುರುವಾಯನಕೆರೆಯ ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವರದಿ ನೀಡಿದ್ದಾರೆ. ೨. ಕಾಲೇಜಿಗೆ ಸಂಬಂಧಿಸಿದ ಅಗ್ನಿ ಸಮಾಪನ ಹಾಗೂ ಸುರಕ್ಷತಾ ಪ್ರಮಾಣಪತ್ರ ನೈಜವಾಗಿಲ್ಲ ಎಂದು ಮಂಗಳೂರಿನ ಜಿಲ್ಲಾ ಅಗ್ನಿಶಾಮಕಧಿಕಾರಿಗಳು ವರದಿ ನೀಡಿದ್ದಾರೆ. ೩. ಕಾಲೇಜಿನ ಕಟ್ಟಡಕ್ಕೆ ಸಂಬಂಧಿಸಿದ ಪ್ಲಾನ್ ಅಪ್ರೂವಲ್ ಕಾಪಿ, ಕಂಪ್ಲೀಷನ್ ಸರ್ಟಿಫಿಕೇಟ್, ಎಸ್ಟಿಪಿ, ಆರ್‌ಡಬ್ಲುಎಚ್ ಪ್ರಮಾಣಪತ್ರಗಳು ನೈಜವಾಗಿಲ್ಲ ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವರದಿ ನೀಡಿದ್ದಾರೆ. ೪. ವೇಣೂರು ಎಕ್ಸೆಲ್ ಪದವಿಪೂರ್ವ ಕಾಲೇಜಿನ ಕಟ್ಟಡ ಪರಿಸರ ಆರೋಗ್ಯವಾಗಿರುವ ಬಗ್ಗೆ ನೀಡಿರುವ ಪ್ರಮಾಣಪತ್ರ ನೈಜವಾಗಿಲ್ಲ ಎಂದು ತಾಲೂಕು ಆರೋಗ್ಯಧಿಕಾರಿಗಳು ವರದಿ ನೀಡಿದ್ದಾರೆ.

ನಿರ್ದೇಶಕರು ಹೇಳಿzನು?: ಸಕ್ಷಮ ಪ್ರಾಧಿಕಾರಗಳು ಪ್ರತಿಕೂಲ ವರದಿಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ನಿರ್ದೇಶನಾಲಯದಿಂದ ಸದರಿ ಕಾಲೇಜಿನ ಆಡಳಿತ ಮಂಡಳಿಗೆ ದಿನಾಂಕ ೦೪.೦೪.೨೦೨೬ರಂದು ಕಾರಣ ಕೇಳಿ ನೋಟೀಸ್ ಜಾರಿಮಾಡಲಾಗಿತ್ತು. ಪತ್ರ ತಲುಪಿದ ೩೦ ದಿನಗಳ ಒಳಗಾಗಿ ಸ್ಪಷ್ಟ ಉತ್ತರವನ್ನು ನೀಡಲು ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ಉತ್ತರ ನೀಡಿರುವುದಿಲ್ಲ ಎಂದು ಆದೇಶದಲ್ಲಿ ದಾಖಲಿಸಲಾಗಿದ್ದು, ದಿನಾಂಕ ೨೧.೦೫.೨೦೨೬ರ ಜಿಲ್ಲಾ ಉಪನಿರ್ದೇಶಕರ ಪತ್ರದನ್ವಯ ಉಪನಿರ್ದೇಶಕರ ಕಚೇರಿಗೂ ಇದುವರೆಗೆ ಉತ್ತರ ಸಲ್ಲಿಸಿರುವುದಿಲ್ಲ ಎಂದು ತಿಳಿಸಲಾಗಿದೆ. ನಕಲಿ ದಾಖಲೆ ನೀಡಿ ಸರ್ಕಾರ/ ಇಲಾಖೆಯನ್ನು ವಂಚಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ನಕಲಿ ದಾಖಲೆಗಳನ್ನು ಸೃಜಿಸಿ, ಇಲಾಖೆಗೆ ತಪ್ಪು ಮಾಹಿತಿ ನೀಡಿ ಅದರ ಆಧಾರದ ಮೇಲೆ ಖಾಸಗಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಅನುಮತಿ ಪಡೆದಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ ಎಂದು ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಆಡಳಿತ ಮಂಡಳಿ ಸ್ಪಷ್ಟನೆ: ಈ ಆದೇಶದ ಕುರಿತು ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ ಕೆಲ ನ್ಯೂಸ್ ಚಾನಲ್‌ನಲ್ಲಿ ಕಾಲೇಜಿನ ಬಗ್ಗೆ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ನಾವು ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು College code SS0351 ರಲ್ಲಿ ಅಡ್ಮಿಶನ್ ಮಾಡಿದ್ದು ಈ ಕಾಲೇಜು ಕೋಡ್‌ನ ಮಾನ್ಯತೆಯ ಬಗ್ಗೆ ಮತ್ತು ವಿದ್ಯಾರ್ಥಿಗಳ ಯಾವ ಕಾಲೇಜು ಕೋಡ್‌ನಲ್ಲಿ ಅಡ್ಮಿಶನ್ ಆಗಿದ್ದಾರೆ ಎನ್ನುವುದನ್ನು ಮಕ್ಕಳ ಸ್ಯಾಟ್ಸ್ ಸಂಖ್ಯೆ ಮೂಲಕ ಹತ್ತಿರದ ಡಿಡಿಪಿಯು ಕಚೇರಿ ಅಥವಾ ಸರಕಾರಿ ಕಾಲೇಜುಗಳಲ್ಲಿ ಖಚಿತ ಪಡಿಸಿಕೊಳ್ಳಬಹುದು. ಈಗ ರದ್ದುಗೊಂಡಿರುವ ಕಾಲೇಜಿನ code SS0376 ಆಗಿದ್ದು ಕಳೆದ ವರ್ಷ ಅದರ ಮಾನ್ಯತೆಗಾಗಿ ಅರ್ಜಿಯನ್ನು ಸಲ್ಲಿಸಿದ್ದು ಮಾತ್ರ ವಿನಃ ಅದರಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ದಾಖಾಲಾತಿ ಮಾಡಿರಲಿಲ್ಲ. ಈ ವರ್ಷ ನಾವಾಗಿಯೇ ಅದರ ಮಾನ್ಯತೆಯನ್ನು ರದ್ದುಗೊಳಿಸಲು ಮಾರ್ಚ್ ತಿಂಗಳ ಕೊನೆಯಲ್ಲಿ ಅರ್ಜಿ ಹಾಕಿದ್ದೆವು. ಆದರೆ ಈಗ ಕಾಣದ ಕೈಗಳು ನಮ್ಮ ಸಂಸ್ಥೆಯ ಘನತೆಯನ್ನು ಹಾಳು ಮಾಡುವ ಉzಶದಿಂದ ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದು ಎಂಬ ಸುಳ್ಳು ಸುದ್ದಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಕಟಿಸುತ್ತಿದ್ದಾರೆ. ತಾವೆಲ್ಲರೂ ಗೊಂದಲಕ್ಕೆ ಒಳಗಾಗದೇ ಸಹಕರಿಸಬೇಕಾಗಿ ವಿನಂತಿ. ಉzಶಪೂರ್ವಕ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಮಂತ್ ಅವರು ತಿಳಿಸಿದ್ದಾರೆ.

ಮಾನ್ಯತೆ ರದ್ದಾದ ಕಾಲೇಜು ಕೋಡ್‌ನಲ್ಲಿ ಯಾವುದೇ ದಾಖಲಾತಿ ಆಗಿಲ್ಲ-ಅದರ ಮಾನ್ಯತೆ ರದ್ದಿಗೇ ನಾವೇ ಅರ್ಜಿ ಹಾಕಿದ್ದೆವು-ಎಕ್ಸೆಲ್ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ: ಎಕ್ಸೆಲ್ ಕಾಲೇಜು ಬೆಳ್ತಂಗಡಿ ಮತ್ತು ವೇಣೂರಿನ ಮಾನ್ಯತೆ ರದ್ದು ಆದೇಶದ ಬಗ್ಗೆ ಗೊಂದಲ ಬೇಡ, ರದ್ದಾಗಿರುವ ಕೋಡ್‌ನಡಿ ನಾವು ಯಾವುದೇ ದಾಖಲಾತಿ ಮಾಡಿಕೊಂಡಿಲ್ಲ ಎಂದು ಎಕ್ಸೆಲ್ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸ್ಪಷ್ಟನೆ ನೀಡಿದ್ದಾರೆ. ಕೆಲ ನ್ಯೂಸ್ ಚಾನಲ್‌ನಲ್ಲಿ ಕಾಲೇಜಿನ ಬಗ್ಗೆ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ನಾವು ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು College code SS0351ರಲ್ಲಿ ಅಡ್ಮಿಶನ್ ಮಾಡಿದ್ದು ಈ ಕಾಲೇಜು ಕೋಡ್‌ನ ಮಾನ್ಯತೆಯ ಬಗ್ಗೆ ಮತ್ತು ವಿದ್ಯಾರ್ಥಿಗಳ ಯಾವ ಕಾಲೇಜು ಕೋಡ್‌ನಲ್ಲಿ ಅಡ್ಮಿಶನ್ ಆಗಿದ್ದಾರೆ ಎನ್ನುವುದನ್ನು ಮಕ್ಕಳ ಸ್ಯಾಟ್ಸ್ ಸಂಖ್ಯೆ ಮೂಲಕ ಹತ್ತಿರದ ಡಿಡಿಪಿಯು ಕಚೇರಿ ಅಥವಾ ಸರಕಾರಿ ಕಾಲೇಜುಗಳಲ್ಲಿ ಖಚಿತ ಪಡಿಸಿಕೊಳ್ಳಬಹುದು. ಈಗ ರದ್ದುಗೊಂಡಿರುವ ಕಾಲೇಜಿನ Code SS0376 ಆಗಿದ್ದು ಕಳೆದ ವರ್ಷ ಅದರ ಮಾನ್ಯತೆಗಾಗಿ ಅರ್ಜಿಯನ್ನು ಸಲ್ಲಿಸಿದ್ದು ಮಾತ್ರ ವಿನಃ ಅದರಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ದಾಖಾಲಾತಿ ಮಾಡಿರಲಿಲ್ಲ. ಈ ವರ್ಷ ನಾವಾಗಿಯೇ ಅದರ ಮಾನ್ಯತೆಯನ್ನು ರದ್ದುಗೊಳಿಸಲು ಮಾರ್ಚ್ ತಿಂಗಳ ಕೊನೆಯಲ್ಲಿ ಅರ್ಜಿ ಹಾಕಿದ್ದೆವು. ಆದರೆ ಈಗ ಕಾಣದ ಕೈಗಳು ನಮ್ಮ ಸಂಸ್ಥೆಯ ಘನತೆಯನ್ನು ಹಾಳು ಮಾಡುವ ಉzಶದಿಂದ ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದು ಎಂಬ ಸುಳ್ಳು ಸುದ್ದಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಕಟಿಸುತ್ತಿದ್ದಾರೆ. ತಾವೆಲ್ಲರೂ ಗೊಂದಲಕ್ಕೆ ಒಳಗಾಗದೇ ಸಹಕರಿಸಬೇಕಾಗಿ ವಿನಂತಿ. ಉzಶಪೂರ್ವಕ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಮಂತ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here