ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಬಳಂಜ ಶಾಲಾ ಸಂಸತ್ತಿಗೆ ಆಯ್ಕೆ

0

ಬಳಂಜ : ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜೂನ್ 11ರಂದು ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಈ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ನಾಯಕಿಯಾಗಿ 7ನೇ ತರಗತಿಯ ಕು.ಮಾನ್ಯ ಹಾಗೂ ಉಪನಾಯಕನಾಗಿ ರಂಜಿತ್ 6ನೇ ತರಗತಿ ಆಯ್ಕೆ ಆಗಿರುತ್ತಾರೆ. ವಿರೋಧ ಪಕ್ಷ ನಾಯಕನಾಗಿ ಸಮೀಕ್ಷ್ ಆಯ್ಕೆಗೊಂಡಿದ್ದು, ಶಿಸ್ತು ಮತ್ತು ಶಿಕ್ಷಣ ,ಆಹಾರ ಮತ್ತು ಆರೋಗ್ಯ, ಸಾಂಸ್ಕೃತಿಕ ,ಕ್ರೀಡಾ, ನೀರಾವರಿ ಮತ್ತು ತೋಟಗಾರಿಕೆ, ವಾರ್ತಾ ಮಂತ್ರಿ ಹೀಗೆ ಬೇರೆ ಬೇರೆ ಖಾತೆಗಳ ಮಂತ್ರಿಗಳ ಆಯ್ಕೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನೂತನ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿ ಶಾಲೆಯ ಸಿಸ್ತು ,ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಸಹಾಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಂಗಸ್ವಾಮಿ ಸಿ ಆರ್ ಇವರು ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರಸಿ,ಜವಾಬ್ದಾರಿಗಳ ಬಗ್ಗೆ ತಿಳಿಸಿ, ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ತಿಳಿಸಿದರು. ಶಾಲಾ ಸಹ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ್ ಆರ್ ಹಾಗೂ ಶ್ರೀಮತಿ ಶೈನಿ ರೀಮಾ ಕ್ರಾಸ್ತಾ ಶಾಲಾ ಸಂಸತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here