ಕುವೆಟ್ಟು: ಬೈಕ್-ಸ್ಕೂಟಿ ನಡುವೆ ಭೀಕರ ಡಿಕ್ಕಿ; ಸವಾರರು ಪ್ರಾಣಾಪಾಯದಿಂದ ಪಾರು

0

ಕುವೆಟ್ಟು: ಮದ್ದಡ್ಕ ಸಮೀಪದ ನೆರಳಕಟ್ಟೆ ಪಯ್ಯೊಟ್ಟು ಮಚ್ಚಿನ ಸಂಪರ್ಕ ರಸ್ತೆಯ ಬಳಿ ಜೂನ್ 18ರಂದು ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಸವಾರರು ಸಣ್ಣಪುಟ್ಟ ಪರಚಿದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್ ಮತ್ತು ಸ್ಕೂಟಿ ಎರಡೂ ವಾಹನಗಳು ಮಡಂತ್ಯಾರು ಕಡೆಯಿಂದ ಬರುತ್ತಿದ್ದವು ಎನ್ನಲಾಗಿದೆ. ಈ ವೇಳೆ ಮುನ್ನಡೆಯುತ್ತಿದ್ದ ಸ್ಕೂಟಿ ಸವಾರ ಯಾವುದೇ ಮುನ್ಸೂಚನೆ ಅಥವಾ ಸಿಗ್ನಲ್ ನೀಡದೆ ದಿಢೀರನೆ ವಾಹನವನ್ನು ತಿರುಗಿಸಿದ್ದೇ ಅಪಘಾತಕ್ಕೆ ನೇರ ಕಾರಣ ಎನ್ನಲಾಗಿದೆ. ಸಿಗ್ನಲ್ ಇಲ್ಲದೆ ತಿರುಗಿಸಿದ ಕಾರಣ ಹಿಂದಿನಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.ಗಾಯಗೊಂಡ ಸವಾರರನ್ನು ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here