ಪೊಮ್ಮಾಜೆ ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ airtel ಹಾಗೂ BSNL ಟವರ್

0

ಬೆಳ್ತಂಗಡಿ : ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಒಂದು ಊರಾಗಿದೆ ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪೂಮ್ಮಾಜೆ. ಇಲ್ಲಿನ ನಾಗರಿಕರ ಹೆಚ್ಚಿನ ಸಮಸ್ಯೆಗಳು ಎಂದರೆ ಇಲ್ಲಿನ ನಿವಾಸಿಗಳ ನಿತ್ಯ ಭವನೇ ಏನೆಂದರೆ ನೆಟ್ವರ್ಕ್ ಸಮಸ್ಯೆ.

ಪೂಮ್ಮಾಜೆ ಪಣಕಜೆ ಭಾಗದಲ್ಲಿ airtel ಹಾಗೂ bsnl ನ ಮೂರು ಟವರ್ ಗಳಿದ್ದು ಏನೂ ಪ್ರಯೋಜನವಿಲ್ಲದಂತಾಗಿದೆ. ಹೆಚ್ಚಿಗೆ ಹೇಳುವುದಾದರೆ ಈ ಟವರ್ಗಳ ಅಡಿಯಲ್ಲಿ ನಿಂತರೂ ನೆಟ್ವರ್ಕ್ ಸಿಗದಿರುವುದು ವಿಶ್ವದ ವಿಚಿತ್ರ ವಸ್ತುಗಳ ಪಟ್ಟಿಯಲ್ಲಿ ಪಣಕಜೆಯ 3 ಟವರ್ ಗಳು ಸೇರ್ಪಡೆಯಾಗಿದೆಯೋ ಅನ್ನುವ ಸಂಶಯ ಕಾಡುತ್ತಿದೆ.

ಉದ್ಯೋಗಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಈ ನೆಟ್ವರ್ಕ್ ಸಮಸ್ಯೆಯಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. Online ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವೆರಿ ಬಾಯ್ ಗಳು ತಗೊಂಡು ಬಂದು ಆರ್ಡರ್ ಮಾಡಿದವರಿಗೆ ತಲುಪಿಸೋಣ ಅಂದ್ರೆ ಮನೆಯ ಮುಂಭಾಗಕ್ಕೆ ಬಂದರೂ ನೆಟ್ವರ್ಕ್ ಇಲ್ಲಾ.. ಎಂತಾ ವಿಚಿತ್ರ ದುರಂತ ನೋಡಿ.

ಇನ್ನು ಸಂಬಂಧ ಪಟ್ಟ ಕಂಪನಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಪೋಮ್ಮಜೆಯ ಆಸುಪಾಸಿನ ನಾಗರಿಕರಿಗೆ ಆಗುವ ತೊಂದರೆಯನ್ನು ಆದಷ್ಟು ಬೇಗ ನಿವಾರಿಸಬೇಕು. ——-✍️. ಯಸ್. ರಿಯಾಝ್

LEAVE A REPLY

Please enter your comment!
Please enter your name here