ಶಿಕ್ಷಣ ಸೇವೆಗೆ ಉದಾರ ಹಸ್ತ: ವಾಣಿ ಶಿಕ್ಷಣ ಸಂಸ್ಥೆಗಳಿಗೆ ಶಾಸಕ ಹರೀಶ್ ಪೂಂಜಾ ಅವರ ವೈಯಕ್ತಿಕ ನಿಧಿಯಿಂದ ₹5 ಲಕ್ಷ ಕೊಡುಗೆ

0

ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದ ಮೇಲಿನ ತಮ್ಮ ಅಪಾರ ಕಾಳಜಿ ಹಾಗೂ ಸಮಾಜಮುಖಿ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು, ತಮ್ಮ ವೈಯಕ್ತಿಕ ನಿಧಿಯಿಂದ ₹5 ಲಕ್ಷ ಮೊತ್ತವನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ನೀಡಿ ಶಿಕ್ಷಣ ಸೇವೆಗೆ ಉದಾರ ಹಸ್ತ ಚಾಚಿದ್ದಾರೆ.ಬೆಳ್ತಂಗಡಿಯ ಹಳೆಕೋಟೆಯಲ್ಲಿರುವ ವಾಣಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದ ನೀಡಲಾದ ಈ ಕೊಡುಗೆಯು ಸಂಸ್ಥೆಯ ಬೆಳವಣಿಗೆಗೆ ಹೊಸ ಚೈತನ್ಯ ತುಂಬುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಮತ್ತಷ್ಟು ಬಲ ತುಂಬಲಿದೆ.

LEAVE A REPLY

Please enter your comment!
Please enter your name here