6೦ಕ್ಕೂ ಅಧಿಕ ಬಾರಿ ರಕ್ತದಾನಗೈದ ರಕ್ತದಾನಿಗೆ ಗೌರವಾರ್ಪಣೆ

0

ಉಜಿರೆ: ಉಜಿರೆಯ ಹಿರಿಯ ಉದ್ಯಮಿ ಶ್ಯಾಮ್ ಭಟ್ ಅತ್ತಾಜೆ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳಲ್ಲಿ 60ಕ್ಕೂ ಅಧಿಕ ಬಾರಿ ರಕ್ತದಾನಗೈದು ಅಗತ್ಯವುಳ್ಳವರ ಜೀವ ಉಳಿಸಲು ನೆರವಾಗಿದ್ದಾರೆ. ಸದಾ ಸಮಾಜಸೇವೆಯಲ್ಲಿ ತ ನ್ನನ್ನು ತೊಡಗಿಸಿಕೊಳ್ಳುತ್ತಿರುವ ಅವರನ್ನು ವಿಶ್ವ ರಕ್ತದಾನ ದಿನಾಚರಣೆ ಪ್ರಯುಕ್ತ ಜೂ 14ರಂದು ಉಜಿರೆಯ ಅವರ ಉದ್ಯಮ ಕ್ಷೇತ್ರದಲ್ಲಿ ತೆರಳಿ ರೋಟರಿ ಬಂಧುಗಳು ಅವರನ್ನು ಸನ್ಮಾನಿಸಿ ವಿಶೇಷವಾಗಿ ಗೌರವಿಸಿದ್ದಾರೆ.

ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ್ ಜಯಕುಮಾರ್ ಶೆಟ್ಟಿ,ಪೂರ್ವಾಧ್ಯಕ್ಷರಾದ ಶರತ್ ಕೃಷ್ಣ ಪಡುವೆಟ್ನಾಯ,ಅರುಣಕುಮಾರ್ ಎಂ ಎಸ್ ,ಮನೋರಮಾ ಭಟ್,ನಿಯೋಜಿತ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ. ಮತ್ತು 2027-28ನೇ ಸಾಲಿನ ನಿಯೋಜಿತ ರೋಟರಿ ಅಧ್ಯಕ್ಷ ಅಬೂಬಕ್ಕರ್ ಮೊದಲಾದವರು ರಕ್ತದಾನಿ ಶ್ಯಾಮ್ ಭಟ್ ಅವರ ಸೇವೆಯನ್ನು ಪರಿಗಣಿಸಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here