






ಬೆಳ್ತಂಗಡಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ನಡೆಯುವ ಒಂದು ವಾರದ ಯೋಗ ತರಬೇತಿ ಶಿಬಿರವನ್ನು ಜೂ16 ರಂದು ಗಣ್ಯರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಉಜಿರೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜಿನ ವೈದ್ಯಶಾಸ್ತ್ರದ ಉಪನ್ಯಾಸಕಿ ಡಾ. ರೆನಿತಾ ಇವರು ಮಾತನಾಡಿ “ಯೋಗ ಎಂಬುವುದು ಅತ್ಯಂತ ಪ್ರಾಚೀನ ವಾದದ್ದು,ಇದು ಆರೋಗ್ಯಕರ ಜೀವನ ಸಾಗಿಸಲು ಇರುವ ಸುಲಭ ಮಾರ್ಗ” ಎಂದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯ್ಕ ವಹಿಸಿ ಮಾತನಾಡಿ “ಮಕ್ಕಳಲ್ಲಿ ಏಕಾಗ್ರತೆ ಬರಲು ಯೋಗ ಸಹಕಾರಿ ಯಾಗಿದೆ,ಒಂದು ವಾರಗಳ ಕಾಲ ನಡೆಯಲಿರುವ ಈ ಶಿಬಿರ ಉತ್ತಮ ರೀತಿಯಲ್ಲಿ ನಡೆಯಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಅನಘಾ ಭಟ್ ಹಾಗೂ ಸಾನಿಕ ಇವರು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕಿ ಗೀತಾ ಸ್ವಾಗತಿಸಿದರು. ಸಹ ಶಿಕ್ಷಕಿ ರೇವತಿ ವಂದಿಸಿದರು. ಶಾಲಾ ಧೈಹಿಕ ಶಿಕ್ಷಕ ಪ್ರಜ್ವಲ್ ಧನ್ಯವಾದವಿತ್ತರು.









