






ಬೆಳ್ತಂಗಡಿ: ತೆಕ್ಕಾರು ವಲಯ ಕಾಂಗ್ರೆಸ್ ಸಮಿತಿಯ ಸಭೆಯು ಜೂ.14 ರಂದು ಬಾಜಾರು ಎಂ.ಟಿ ಅದಂ ಮನೆ ಬಳಿ ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎನ್.ಎಚ್ ಅಬ್ದುಲ್ ರಹಿಮಾನ್ ವಹಿಸಿದರು. ಸಭೆಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ದಕ್ಷಿಣ ಕನ್ನಡ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ರವರು ಸವಿಸ್ತಾರವಾಗಿ SIR ಇದರ ಬಗ್ಗೆ ಮನದಟ್ಟು ಮಾಡಿದರು ಹಾಗೂ ಗ್ರಾಮದ ಅಭಿವೃದ್ಧಿಯ ಬಗ್ಗೆ ಮಾತಾಡಿದರು. ಸಭೆಯಲ್ಲಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.
ಪ್ರಥಮವಾಗಿ ತೆಕ್ಕಾರು ಗ್ರಾಮದ ಬಾಜಾರು ಜೋಡುಕಟ್ಟೆ ರಸ್ತೆ ಮತ್ತು ಸರಳಿಕಟ್ಟೆಯಿಂದ ಗೋವಿಂದರಗುಳಿ ರಸ್ತೆ ಅಭಿವೃದ್ಧಿಯ ಬಗ್ಗೆ ಚರ್ಚೆಯನ್ನು ಮಾಡಲಾಯಿತು ಈ ರಸ್ತೆಯ ಬಗ್ಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಳಿಗೆ ನಿಯೋಗ ಹೋಗುವುದೆಂದು ತೀರ್ಮಾನಿಸಲಾಯಿತು, ಕಳೆದ 15 ವರ್ಷದಿಂದ ಯಾವುದೇ ರೀತಿಯ ರಸ್ತೆಯ ಅಭಿವೃದ್ಧಿ ಆಗಿರುವುದಿಲ್ಲ ಮುಂದಿನ ಮೂರು ತಿಂಗಳೊಳಗೆ ರಸ್ತೆಯ ಅಭಿವೃದ್ಧಿಯ ಕೆಲಸವನ್ನು ರಕ್ಷಿತ್ ಶಿವರಾಂ ಇವರ ನೇತೃತ್ವದಲ್ಲಿ ಮಾಡಿ ಕೊಡಬೇಕಾಗಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.ತೆಕ್ಕಾರು ಭಾಗಕ್ಕೆ ಸರಕಾರಿ ಬಸ್ ಬರುವಂತೆ ಸಂಬಂಧ ಪಟ್ಟ ಇಲಾಖೆಗೆ ಗ್ರಾಮ ಸಮಿತಿಯ ವತಿಯಿಂದ ಹೋಗಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಕೆ.ಎಸ್.ಆರ್ಟಿ.ಸಿ ಬಸ್ಸು ಬಗ್ಗೆ ಚರ್ಚೆಯನ್ನು ಮಾಡಲಾಯಿತು.ಸರಳಿಕಟ್ಟೆಯಲ್ಲಿ ಪದವಿಪೂರ್ವ ಕಾಲೇಜ್ ನಿರ್ಮಾಣ ಮಾಡುವಂತೆ ಸಂಬಂಧ ಪಟ್ಟ ಇಲಾಖೆಗೆ ಹೋಗಿ ಮಾತುಕತೆ ನಡೆಸಿ ಮುಂದಿನ ವರ್ಷ ಪಿ.ಯು.ಸಿ ಕಾಲೇಜ್ ಮಾಡುವಂತೆ ತೀರ್ಮಾನಿಸಲಾಯಿತು.


SIR ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಸಂಗ್ರಹಣೆ ಮಾಡಿ ಇಟ್ಟುಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ ಯುವತಿಯರು ಮತದಾನದ ಹಕ್ಕನ್ನು ಪಡೆಯಲು ಮತದಾರರ ನೋಂದಾವಣೆ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸವನ್ನು ಮಾಡಬೇಕಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲಾ ಕಾರ್ಯಕರ್ತ ಮಿತ್ರರು ಹಾಗೂ ಹಿರಿಯರ ಸಲಹೆ ಸೂಚನೆ ಪಡೆದುಕೊಂಡು ಹಾಗೂ ಯುವಕರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸದೃಢವಾಗಿ ಕಟ್ಟಬೇಕಾಗಿದೆ ಎಂದು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎನ್.ಎಚ್ ಅಬ್ದುಲ್ ರಹಿಮಾನ್ ಅಧ್ಯಕ್ಷೀಯ ಮಾತನ್ನು ಆಡಿದರು.
ಸಭೆಯಲ್ಲಿ ಪಕ್ಷದ ಹಿರಿಯರಾದ. ಬಿ.ಎಮ್ ಹುಸೇನ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಟಿ ಅದಂ, ಇಸ್ಮಾಯಿಲ್ ಸೀಮೆಗೋಳಿ, ತೆಕ್ಕಾರು ಕಿಸಾನ್ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಸುಲೇಮಾನ್ ಬೈಲಮೇಲ್, ಸಮಿತಿಯ ಕಾರ್ಯದರ್ಶಿ ಐ.ಬಿ ರಫೀಕ್ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಫಾಳುಲ್, ತಾಲೂಕು ಯುವ ಕಾಂಗ್ರೆಸ್ ಸದಸ್ಯ ಸಿದ್ದಿಕ್ ಹಾಗೂ ಹಲವಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿ ಮಿತ್ರರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.ತೆಕ್ಕಾರ ಪ್ಯಾಕ್ಸ್ ನಿರ್ದೇಶಕ ಎಸ್.ಎಮ್.ಎಸ್ ಇಬ್ರಾಹಿಂ ಮುಸ್ಲಿಯರ್ ಸ್ವಾಗತಿಸಿ, ಸುಲೇಮಾನ್ ಬೈಲಮೇಲ್ ಧನ್ಯವಾದವಿತ್ತರು.









