ಗೇರುಕಟ್ಟೆ ಎಂ.ಜನಾರ್ಧನ ಪೂಜಾರಿ-ಕೆ.ಕಮಲಾವತಿ ದಂಪತಿಯ 70ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆ

0

ಗೇರುಕಟ್ಟೆ : ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸ್ಥಾಪಾಕಧ್ಯಕ್ಷ, ತಣ್ಣೀರುಪಂತ ಮತ್ತು ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ತಣ್ಣೀರುಪಂತ ಮತ್ತು ಕಳಿಯ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಸದಸ್ಯರು, ಬೆಳ್ತಂಗಡಿ ಬಿಲ್ಲವ ಸಂಘದ ಮಾಜಿ ನಿರ್ದೇಶಕರು ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆ ಗಯ್ಯುತ್ತಿರುವ ಗೇರುಕಟ್ಟೆ ಜೆ.ಕೆ.ನಿವಾಸದ ಎಂ. ಜನಾರ್ಧನ ಪೂಜಾರಿ ಮತ್ತು ಕೆ.ಕಮಲಾವತಿ ದಂಪತಿಯ 70ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆ ಜೂ.14 ರಂದು ಗೇರುಕಟ್ಟೆ ಸಹಕಾರಿ ಸಭಾಭವನದಲ್ಲಿ ವಿಜೃಭ್ರಂಣೆ ನಡೆಯಿತು.

ವಿಶ್ರಾಂತ ಪ್ರಾಂಶುಪಾಲ ಪ್ರೊ. ಎ.ಕೃಷ್ಣಪ್ಪ ಪೂಜಾರಿಯವರು ಜನಾರ್ದನ ಪೂಜಾರಿಯವರ ಸಾಧನೆ, ಕಾರ್ಯ ವೈಖರಿ ಬಗ್ಗೆ ಮಾತಾನಾಡಿದರು.ಕಳಿಯ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಅಧ್ಯಕ್ಷ ತೇಜೋಮಯ, ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಸಾರಿಗೆ ಇಲಾಖೆಯ ಹಿರಿಯ ನಿರೀಕ್ಷಕ ಚರಣ್ ಕುಮಾರ್, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ., ತಣ್ಣಿರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಯೋಗೀಶ್, ಸಿಬ್ಬಂದಿಗಳಾದ ರೇಖಾ ರಾಘವ, ದೀಪ್ತಿ ಸುವರ್ಣ, ಭುವನ್ ಬಿ., ಪಿಗ್ಮಿ ಸಂಗ್ರಾಹಕರಾದ ದಿನೇಶ್ ಕುಮಾರ್, ದಿನೇಶ್ ಎಮ್.ಜಿ., ಪುಷ್ಪಾಕರ ನಾಯಕ್, ಸೌಮ್ಯ ದಿನೇಶ್, ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು, ಬಂಧು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದು ಶುಭ ಕೋರಿದರು..ಜೆ.ಕೆ.ನಿವಾಸದ ಕುಟುಂಬದ ಎಂ.ತುಕರಾಮ್ ಪೂಜಾರಿ ಮತ್ತು ವನಜ ಕಮಲಶ್ರೀ ಗೇರುಕಟ್ಟೆ, ವಿನೋದಿನಿ ರಾಮಪ್ಪ ಎಸ್,, ವೃಕ್ಷ ಗುರುವಾಯನಕೆರೆ, ಯೋಗೀಶ್ ಕುಮಾರ್ ಮತ್ತು ಶಯನ ಮಂಗಳೂರು, ಜ್ಯೋತಿ ಮಧ್ವರಾಜ್ ಜ್ಯೋತಿ ನಿಲಯ ಗೇರುಕಟ್ಟೆ, ಹೇಮಂತ್ ಕುಮಾರ್ ಎಂ. ಮತ್ತು ನಿವೇದಿತಾ ಮೈಸೂರು ಹಾಗೂ ಮೊಮ್ಮಕ್ಕಳು, ಮರಿ ಮಕ್ಕಳು, ಹಿತೈಸಿಗಳು ದಂಪತಿಗಳ ಆರ್ಶೀವಾದ ಪಡೆದು ಶುಭಾ ಹಾರೈಸಿದರು.

LEAVE A REPLY

Please enter your comment!
Please enter your name here