






ಬೆಳ್ತಂಗಡಿ ; ಸಂತ ಸೆಬಾಸ್ಟಿಯನ್ ಚರ್ಚ್ ಗರ್ಡಾಡಿಯಲ್ಲಿ ಬ್ರದರ್ ಮಾರ್ಸಿಯೊ ಆನಂದ್ ರವರ ಧಾರ್ಮಿಕ ಜೀವನದ 60 ವರ್ಷದ ವಜ್ರೋತ್ಸವ ಸಮರಂಭವು ನೆರವೇರಿತು. ಕರ್ನಾಟಕ ಪ್ರಾಂತೀಯ ಕಾಪುಚಿನ್ ಧರ್ಮದ ಪಾದರ್ ರೊಬಿನ್ ವಿಕ್ಟರ್ ಡಿಸೋಜ ಪ್ರೊವಿಂನ್ಸಿಯಾಲ್ ಮಿನಿಸ್ಟರ್ ಕರ್ನಾಟಕ ಪ್ರಾಂತ್ಯ ಅವರ ನೇತೃತ್ವ ಹಾಗೂ ಗರ್ಡಾಡಿ ಚರ್ಚಿನ ಧರ್ಮಗುರುಗಳು ಹಾಗೂ ಇತರ ಗುರುಗಳು ಮತ್ತು ಚರ್ಚಿನ ಪಾಲನ ಮಂಡಳಿಯ ಸಹ ಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚರ್ಚಿನ ದಿವ್ಯ ಬಲಿಪೂಜೆಯಲ್ಲಿ ಕರ್ನಾಟಕ ಪ್ರಾಂತೀಯ ಕಾಪುಚಿನ್ ಧರ್ಮದ ಹಾಗೂ ಚರ್ಚಿನ ಎಲ್ಲಾ ಗುರುಗಳು ಸೇರಿ ಬ್ರದರ್ ಆನಂದ್ ರವರಿಗೆ ಶುಭವನ್ನು ಹಾರೈಸಿ ಪ್ರಾರ್ಥಿಸಲಾಯಿತು.ನಂತರ ಹಮ್ಮಿಕೊಂಡ ವೇದಿಕೆಯ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತೀಯ ಕಾಪುಚಿನ್ ಧರ್ಮದ ಪ್ರೊವಿನ್ಸಿಯಾಲ್ ರಾಬಿನ್ ವಿಕ್ಟರ್ ಡಿಸೋಜ, ಚರ್ಚಿನ ಧರ್ಮ ಗುರುಗಳು ಪಾದರ್ ಸುದೀಪ್ ಸಂತಾನ್ ಗೊನ್ಸಾಲ್ವಿಸ್, ಬೆಳ್ತಂಗಡಿ ವಲಯದ ವಿಗಾರ್ ವಾರ್ ವಂದನಿಯ ಪಾದರ್ ವಾಲ್ಟರ್ ಡಿಮೆಲ್ಲೊ ಹಾಗೂ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೀವನ್ ಮೋನಿಸ್, ಬ್ರದರ್ ಆನಂದ್ ರವರ ಜೊತೆ ಅವರ ಧಾರ್ಮಿಕ ಜೀವನದ 60 ನೇ ವರ್ಷದ ವಜ್ರೋತ್ಸವ ಸಂಭ್ರಮದ ಕೇಕ್ ಹಂಚಿಕೊಂಡ್ಡರು.


ನಂತರ ಪ್ರೊವಿನ್ಸಿಯಾಲ್ ರಾಬಿನ್ ಬ್ರದರ್ ಆನಂದ್ ರವರ ಬಗ್ಗೆ ಮಾತನಾಡಿ ಅವರು ನೀಡಿದ ಎಲ್ಲ ಸೇವೆಯನ್ನು ಸ್ಮರಿಸಿದರು. ಅವರಿಗೆ ಶುಭ ಹಾರೈಸಿ ಎಲ್ಲಾ ಕಾಪುಚಿನ್ ಪಾದರ್ ಗಳ ಪರವಾಗಿ ಸನ್ಮಾನವನ್ನು ಮಾಡಿದರು. ಹಾಗೆಯೇ ಗರ್ಡಾಡಿ ಚರ್ಚಿನ ಧರ್ಮ ಗುರುಗಳು ಹಾಗೂ ಇತರ ಗುರುಗಳು ಮತ್ತು ಚರ್ಚಿನ ಎಲ್ಲಾ ಸಂಘ ಸಂಸ್ಥೆಗಳ ಪರವಾಗಿ ಬ್ರದರ್ ಆನಂದ್ ರವರಿಗೆ ಸನ್ಮಾನಿಸಲಾಯಿತು. ಕೊನೆಗೆ ನೆರೆದಿರುವ ಎಲ್ಲಾರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಚರ್ಚಿನ ಧರ್ಮಗುರುಗಳು ಪಾದರ್ ಸುದೀಪ್ ನೆರೆದಿರುವ ಎಲ್ಲರನ್ನು ಸ್ವಾಗತಿಸಿದರು.ಬ್ರದರ್ ಆನಂದ್ ನೆರೆದಿರುವ ಎಲ್ಲಾರಿಗೂ ಧನ್ಯವಾದವನ್ನು ನೀಡಿದರು.ಗ್ಯಾವಿನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.









