ಯುಜಿ ಸಿಇಟಿ ಪರೀಕ್ಷೆ : ವಿದ್ವತ್ ಕಾಲೇಜಿನ ಚಿನ್ಮಯ್ ಜಿ.ಕೆ.ಗೆ ರಾಜ್ಯದಲ್ಲಿ 7ನೇ ರ್‍ಯಾಂಕ್ ಅಭೂತಪೂರ್ವ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿ

0

ಗುರುವಾಯನಕೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಯುಜಿ ಸಿಇಟಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಕಾಲೇಜಿನ ಚಿನ್ಮಯ್ ಜಿ.ಕೆ. ಅಭೂತಪೂರ್ವ ಸಾಧನೆ ಮಾಡಿದ್ದಾರೆ.ಈ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ Rank ಪಡೆದಿರುವ ಚಿನ್ಮಯ್ ಬೆಳ್ತಂಗಡಿ ತಾಲೂಕಿಗೆ ಕೀರ್ತಿ ತರುವ ಸಾಧನೆ ಮಾಡಿದ್ದಾರೆ.

ಅವರು ಒಟ್ಟು 98.61111111 ಪಡೆದಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಯುಜಿ ಸಿಇಟಿ ಪರೀಕ್ಷೆ ಬರೆದಿದ್ದರು. ಚಿನ್ಮಯ್ ಇಂಜಿನಿಯರಿಂಗ್ ವಿಭಾಗದಲ್ಲಿ 7ನೇ rank ಪಡೆದು ಅಮೋಘ ಸಾಧನೆ ಮೆರೆದಿದ್ದಾರೆ.

ಟಾಪ್ 10 rank ಒಳಗಿನ ವಿದ್ಯಾರ್ಥಿಗಳಲ್ಲಿ ಬೆಳ್ತಂಗಡಿಯ ಏಕೈಕ ವಿದ್ಯಾರ್ಥಿ ಎನ್ನುವುದು ಗಮನಾರ್ಹ. ಪಿಯು ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕ ಪಡೆದು ರಾಜ್ಯಾದ್ಯಂತ ಗಮನಸೆಳೆದಿದ್ದ ಚಿನ್ಮಯ್, ಈ ಯುಜಿ ಸಿಇಟಿ ಪರೀಕ್ಷೆಯಲ್ಲೂ ದಾಖಲೆಯ ಸಾಧನೆ ಮಾಡಿ ಗುರುವಾಯನಕೆರೆ ವಿದ್ವತ್ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

LEAVE A REPLY

Please enter your comment!
Please enter your name here