ಗುರುವಾಯನಕೆರೆ ಸುಪ್ರೀಂ ಆಟೋ ಶೋರೂಮ್‌ನಲ್ಲಿ ಪರಿಸರ ದಿನಾಚರಣೆ ಆಚರಣೆ

0

ಗುರುವಾಯನಕೆರೆ: ಇಲ್ಲಿಯ ಸುಪ್ರೀಂ ಆಟೋ ಡೀಲರ್ಸ್ ಪ್ರೈವೇಟ್ ಲಿಮಿಟೆಡ್ ಬೆಳ್ತಂಗಡಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಜೂ.5 ರಂದು ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಡಿ.ಜಿ.ಎಂ ಗುರುಪ್ರಸಾದ್ ರವರು ದೀಪ ಪ್ರಜ್ವಲನೆ ಮಾಡಿದರು.

ಹಿರಿಯ ಆಟೋ ಚಾಲಕರಾದ ಉಮೇಶ್ ಉಜಿರೆ, ಶಾಹಿಲ್ ಬೆಳ್ತಂಗಡಿ, ದಿನೇಶ್ ಬೆಳ್ತಂಗಡಿ, ಶಾಂತಿ ಬೆಳ್ತಂಗಡಿ, ರಾಜೇಶ್ವರಿ ಮಡಂತ್ಯಾರು, ಶಾಂತಿ ಮದ್ದಡ್ಕ, ರವೀಂದ್ರ ಗುರುವಾಯನಕೆರೆ, ಹೊನ್ನಪ್ಪ ಉಜಿರೆ, ಪ್ಯಾಟ್ರಿಕ್ ಪಿಂಟೋ ಬೆಳ್ತಂಗಡಿ ಇವರನ್ನು ಸಂಸ್ಥೆಯ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ಆಗಮಿಸಿದ ಎಲ್ಲಾ ಗ್ರಾಹಕರಿಗೆ ಉಚಿತ ಸಸಿಗಳನ್ನು ನೀಡಿ ವಾಹನ ತಪಾಸಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್, ಕಟ್ಟಡ ಮಾಲಕರಾದ ಉಮರಬ್ಬ, ಪ್ರಗತಿಪರ ಕೃಷಿಕರಾದ ತಾರಾನಾಥ ಉಜಿರೆ, ರಿಕ್ಷಾ ಪಾರ್ಕ್ ನ ಅಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು.ಸೀನಿಯರ್ ವಕ್ಸ್ ನ ಮ್ಯಾನೇಜರ್ ವಿಜೇತ್ ಪ್ರಸ್ತಾವನೆಗೈದರು.

ಸೇಲ್ಸ್ ಮ್ಯಾನೇಜರ್ ವಿನೋದ್ ಸ್ವಾಗತಿಸಿ, ಸರ್ವಿಸ್ ಮ್ಯಾನೇಜರ್ ಶರತ್ ವಂದಿಸಿದರು.

LEAVE A REPLY

Please enter your comment!
Please enter your name here