






ಉಜಿರೆ : ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ) ಆಶ್ರಯದಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಭಗವದ್ಗೀತಾ ತರಗತಿ ಜೂ 3 ಬುಧವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾತಃಕಾಲ 8.15 ರಿಂದ 9.15 ರವರೆಗೆ ಭಗವದ್ಗೀತೆಯ ಅಧ್ಯಾಯ – 17“ಶ್ರದ್ಧಾತ್ರಯ ವಿಭಾಗ ಯೋಗ” ಪಠಣದೊಂದಿಗೆ ಪ್ರಾರಂಭಗೊಂಡಿತು.


ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿದ್ಯಾರ್ಥಿಗಳಿಗೆ ಜಗದ್ಗುರು ಶ್ರೀ ಕೃಷ್ಣನ ಪೂರ್ಣಾನುಗ್ರಹವನ್ನು ಪ್ರಾರ್ಥಿಸಿ ಪಠಣ ತರಗತಿ ಶುಭಾರಂಭಗೊಳಿಸಲಾಯಿತು . ಡಾ |ಪ್ರದೀಪ್ ನಾವೂರು ವಿದ್ಯಾರ್ಥಿಗಳಿಗೆ ಭಗವದ್ಗೀತಾ ತರಗತಿಯ ಮಾರ್ಗದರ್ಶನ ನೀಡಿದರು.









