






ಉಜಿರೆ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ (ಕಾರ್ಟೂನ್) ಸ್ಪರ್ಧೆಯಲ್ಲಿ ಉಜಿರೆಯ ಶೈಲೇಶ್ ಕುಮಾರ್ ವಿಶೇಷ ಬಹುಮಾನ ಪಡೆದಿದ್ದಾರೆ.


ಕಾರ್ಟೂನ್ ವಾಚ್ ಮ್ಯಾಗಜಿನ್ ಹಾಗೂ ಛತ್ತೀಸ್‌ಗಢ ಪರಿಸರ ಸಂರಕ್ಷಣಾ ಮಂಡಳಿ, ಛತ್ತೀಸ್‌ಗಢ ಸರ್ಕಾರ ಇವರ ಸಹಯೋಗದಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯಿಂದ ಭಾಗವಹಿಸಿದ್ದರು.
ಇವರಲ್ಲಿ ಕರ್ನಾಟಕದ ಇಬ್ಬರಿಗೆ ವಿಶೇಷ ಬಹುಮಾನ ಲಭಿಸಿದ್ದು, ಅವರಲ್ಲಿ ಶೈಲೇಶ್ ಉಜಿರೆ ಒಬ್ಬರಾಗಿದ್ದಾರೆ.ಉಜಿರೆ ಎಸ್ ಡಿಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿರುವ ಶೈಲೇಶ್ ಉಜಿರೆ, ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.









