ಕಾನರ್ಪದಲ್ಲಿ ಅಕ್ರಮ ಗೋ ಸಾಗಾಟ; ತಡೆಯಲು ಬಂದ ಸಾರ್ವಜನಿಕರ ಮೇಲೆ ಸಾಗಾಟದ ಪಿಕಪ್ ಅನ್ನು ಮೈ ಮೇಲೆ ಹರಿಯುವಂತೆ ದರೋಡೆ ಕೋರರಂತೆ ವರ್ತಿಸಿದ ದುಷ್ಕರ್ಮಿಗಳು!

0

ಕಾನರ್ಪ : ಇಲ್ಲಿನ ಕಾನರ್ಪ ಪಣಿಕಲ್ ರಾಘವೇಂದ್ರ ಭಟ್ಟರ ಮನೆಯಿಂದ ತೋಟತ್ತಾಡಿ ಅನಿಲ್ ಎಂಬವರ ಮನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ವಾಹನವು ಅಡ್ಡಗಟ್ಟಿತಡೆಯಲು ಬಂದವರ ಮೇಲೆ , ಡಿಕ್ಕಿ ಹೊಡೆಯುವ ರೀತಿಯಲ್ಲಿ ಬಂದು ಪರಾರಿಯಾದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ರಮ ಗೋ ಸಾಗಾಟದ ಜಾಲ ಇದರಲ್ಲಿ ಭಾಗಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪನಿಕ್ಕಲ್ ರಾಘವೇಂದ್ರ ಭಟ್ಟರ ಮನೆಯಿಂದ ಹೊರಟಿದ್ದ ಗೋಕಳ್ಳರು ಪಿಕಪ್ ನಲ್ಲಿ ತೆರಳುತ್ತಿದ್ದಾಗ, ಸಾರ್ವಜನಿಕರು ತಡೆಯಲು ಯತ್ನಿಸಿದ್ದಾರೆ . ದುಷ್ಕರ್ಮಿಗಳು ಯುವಕರ ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವಂತೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಭೀತಿ ಸೃಷ್ಟಿಸಿದ್ದಾರೆ.ಮಂಜುಶ್ರೀನಗರದಲ್ಲಿ ಗೋವನ್ನು ಬಿಟ್ಟು ಪರಾರಿ, ಒಬ್ಬ ವಶಕ್ಕೆ ಇಬ್ಬರು ಪರಾರಿ:ತಮ್ಮ ಕೃತ್ಯವನ್ನು ಸ್ಥಳೀಯ ಯುವಕರು ಗಮನಿಸಿ ಬೆನ್ನಟ್ಟುತ್ತಿದ್ದಂತೆ ಗಾಬರಿಗೊಂಡ ಗೋ ಕಳ್ಳರು, ಮಂಜುಶ್ರೀನಗರದ ಹತ್ತಿರ ಯಾರಿಗೂ ತಿಳಿಯದಂತೆ ಗೋವನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ವಾಹನದಲ್ಲಿದ್ದ ಒಬ್ಬ ಆರೋಪಿ(ಅನಿಲ್ ತೋಟತ್ತಾಡಿ )ಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಪಿಕಪ್‌ನಲ್ಲಿದ್ದ ಇನ್ನುಳಿದ ಇಬ್ಬರು ಆರೋಪಿಗಳು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.ಸ್ಥಳಕ್ಕೆ ಧಾವಿಸಿದ ಪೊಲೀಸರು ಜಾನುವಾರು ವಶಕ್ಕೆ ಪಡೆದುಕೊಂಡಿದ್ದು, ಪರಾರಿಯಾದ ಇಬ್ಬರು ಆರೋಪಿಗಳ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತರುವಂತೆ ವರ್ತಿಸಿದ ಈ ಗೋ ಕಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ..

LEAVE A REPLY

Please enter your comment!
Please enter your name here