ಮಾಲಾಡಿ ಶಾಲಾ ಪ್ರಾರಂಭೋತ್ಸವ LKG ಉದ್ಘಾಟನೆ, ಪೋಷಕ ಶಿಕ್ಷಕರ ಮಹಾಸಭೆ,ಉಚಿತ ಪುಸ್ತಕ ವಿತರಣೆ

0

ಮಾಲಾಡಿ : ಮಾಲಾಡಿ ಸ. ಉ. ಪ್ರಾ.ಶಾಲೆಯಲ್ಲಿ 2026 – 27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಎಲ್ ಕೆಜಿ ಉದ್ಘಾಟನೆ, ಉಚಿತ ನೋಟ್ ಪುಸ್ತಕ ಮತ್ತು ಪಠ್ಯಪುಸ್ತಕಗಳ ವಿತರಣಾ ಕಾರ್ಯಕ್ರಮ ಜೂ. 1 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಶಾಲೆಯ ಮುಖ್ಯ ಶಿಕ್ಷಕಿ ಜುಲಿಯಾನ ಶಾಲಿನಿ ಬರೆಟ್ಟಿ ಸ್ವಾಗತಿಸಿದರು. ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಪುಟಾಣಿಗಳಿಗೆ ಹೂವು ಮತ್ತು ಬಲೂನು ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ನಂತರ ಯುಕೆಜಿ ತರಗತಿಯ ಉದ್ಘಾಟನೆಯನ್ನು ಮಾಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖ‌ರ್ ರೈ ನೆರವೇರಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಊರದಾನಿಗಳಾದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮಡಂತ್ಯಾರ್ ಘಟಕದ ಅಧ್ಯಕ್ಷ ಹಾಜಿ ಲತೀಫ್ ಸಾಹೇಬ್ ಇವರ ಕೊಡುಗೆಯಾದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಹಾಗೂ ಉಚಿತ ಪಠ್ಯಪುಸ್ತಕ ವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಹಕೀಂ ವಹಿಸಿದ್ದರು. ವೇದಿಕೆಯಲ್ಲಿ ಮಾಲಾಡಿ ಶಾಲಾ ಎಸ್. ಡಿ. ಎಂ. ಸಿ. ಉಪಾಧ್ಯಕ್ಷೆ ಶೋಭಾ, ಉದ್ಯಮಿಗಳಾದ ನಿತ್ಯಾನಂದ ಕೊಲ್ಪದಬೈಲು, ದಾನಿಗಳಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕ‌ರ್ ಜೆ.ಎಂ., ಪುಂಜಾಲಕಟ್ಟೆ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಚೇತನ, ಮುಖ್ಯ ಶಿಕ್ಷಕಿ ಜುಲಿಯಾನ ಶಾಲಿನಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕ ಪ್ರಶಾಂತ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿನೋದ ಕೆ.ವಂದಿಸಿದರು.

LEAVE A REPLY

Please enter your comment!
Please enter your name here