







ಬೆಳ್ತಂಗಡಿ, ಜೂನ್ 2: ಬೆಳಾಲು ಗ್ರಾಮದ ಮಾಯ ತಾರಗಂಡಿಯಲ್ಲಿ ಕುಡಿಯುವ ನೀರಿಗಾಗಿ ಹಳ್ಳದಲ್ಲಿ ಹೊಂಡ ತೆಗೆದು ನೀರು ಪಡೆಯಬೇಕಾದ ಸಮಸ್ಯೆ ಕುರಿತು ಬೆಳ್ತಂಗಡಿ ಸುದ್ದಿ ಮಾಧ್ಯಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಇದೀಗ ಜೂನ್. 03 ರಂದು ನೀರು ಪೂರೈಕೆ ಮಾಡಿದೆ.
ಏನಾಗಿತ್ತು? “ಬೇಸಿಗೆಯಲ್ಲಿ ಬಿಂದಿಗೆಯೊಂದಿಗೆ ಪರದಾಟ: ಬೆಳಾಲು ಗ್ರಾಮದ ಮಾಯ ವಸಂತಿ ಅವರು 1ಕಿ.ಮೀ ದೂರದ ಹಳ್ಳಕ್ಕೆ ಹೋಗಿ ನೀರು ತರುವಂತಾಗಿತ್ತು, ಕಳೆದ 5 ತಿಂಗಳುಗಳಿಂದ ನಳ್ಳಿ ನೀರು ಬಂದಿರಲಿಲ್ಲ ಎಂಬ ವರದಿ ಮಾಡಿದ ಬಳಿಕ ಮಾಹಿತಿ ತಿಳಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ


ವರದಿ ಬಳಿಕ ಕ್ರಮ: ತಕ್ಷಣ ಸ್ಪಂದನೆ: ಜೂನ್ 02 ವರದಿ ಬಂದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರ ಪ್ರತಿಕ್ರಿಯೆ:“ಬೆಳ್ತಂಗಡಿ ಸುದ್ದಿ ಮಾಧ್ಯಮದಲ್ಲಿ ಸುದ್ದಿ ಬಂದ ಒಂದೇ ದಿನದಲ್ಲಿ ನೀರು ಬಂತು. ಮಾಧ್ಯಮದವರಿಗೆ ಧನ್ಯವಾದ” ಎಂದು ಬೆಳಾಲು ಗ್ರಾಮದ ವಸಂತಿ ಹೇಳಿದರು.









