ಸ.ಉ.ಹಿ.ಪ್ರಾ.ಶಾಲೆ ಕುವೆಟ್ಟು ಶಾಲಾ ಪ್ರಾರಂಭೋತ್ಸವ

0

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆ ಕುವೆಟ್ಟು ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳನ್ನು ಶಾಲಾ ಅಧ್ಯಾಪಕ ವೃಂದದವರು ಬಲೂನ್ ಮತ್ತು ಬ್ಯಾಡ್ಜ್ ನೀಡಿ, ಎಸ್ ಕೆ ಎಫ್ ಮದ್ದಡ್ಕ ಇವರು ಸಿಹಿ ತಿಂಡಿ ನೀಡಿ ಸ್ವಾಗತಿಸಿದರುತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಪುಟಾಣಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಲಾವಣ್ಯ ಶೆಟ್ಟಿ ಅರ್ಕಜೆ ಅಧ್ಯಕ್ಷತೆ ವಹಿಸಿದ್ದರು. ನಿರ್ಗಮಿತ ಎಸ್ ಡಿ ಎಂ ಸಿ ಅಧ್ಯಕ್ಷಸಿರಾಜ್ ಎಂ ಚಿಲಿಂಬಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು. ಮದ್ದಡ್ಕ ಅಂಗನವಾಡಿ ಕಾರ್ಯಕರ್ತೆ ಸುಶೀಲ, ಆರೋಗ್ಯ ಕಾರ್ಯಕರ್ತೆ ಪ್ರೀತಿ, ಆಶಾ ಕಾರ್ಯಕರ್ತೆ ಜಯಂತಿ, ಶಾಲಾ ಮುಖ್ಯ ಶಿಕ್ಷಕ ಭಾಸ್ಕರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸರ್ಕಾರ/ಇಲಾಖೆ ನೀಡಿದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಯನ್ನು ನಗದು ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಆರೋಗ್ಯ ಕಾರ್ಯಕರ್ತೆ ಪ್ರೀತಿ ಡೆಂಗ್ಯೂ ಹಾಗೂ ಮಲೇರಿಯ ಕಾಯಿಲೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕ ಭಾಸ್ಕರ ಸ್ವಾಗತಿಸಿ ಶೈಕ್ಷಣಿಕ ವರ್ಷದ ಮಾಹಿತಿ ನೀಡಿದರು, ಹಿರಿಯ ಶಿಕ್ಷಕಿ ಫಿಲೋಮಿನಾ ಲೋಬೋ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here