ಮಡಂತ್ಯಾರು: ಪಾರೆಂಕಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಗೌರಾರ್ಪಣೆ, ಪುಸ್ತಕ ವಿತರಣೆ

0

ಮಡಂತ್ಯಾರು: ಪಾರೆಂಕಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಮಹಿಳಾ ಬಿಲ್ಲವ ವೇದಿಕೆ ಹಾಗೂ ಯುವ ಬಿಲ್ಲವ ವೇದಿಕೆ ಪಾರೆಂಕಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ವರ್ಷದ ಶಾಲಾ ಮಕ್ಕಳ ಪುಸ್ತಕ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಗೌರಾರ್ಪಣೆ ಮತ್ತು ಸ್ವಾತಂತ್ರ್ಯ ಯೋಧ ಉಬರ್ ಮಂಜ ಬೈದ್ಯರ ಸಂಸ್ಮರಣಾ ಕಾರ್ಯಕ್ರಮವು ಸಂಘದ ಗೌರವಾಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ್ಲ ಅವರ ಗೃಹದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರಿನ ಪದ್ಮನಾಭ ಸುವರ್ಣ ಅವರು, ಅಪ್ರತಿಮ ವೀರ ಸ್ವಾತಂತ್ರ್ಯ ಯೋಧ ಉಬಾರ್ ಮಂಜ ಬೈದ್ಯರ ಜೀವನ ಮತ್ತು ಹೋರಾಟದ ಕುರಿತು ವಿಶೇಷ ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ವೆಂಕಪ್ಪ ಪೂಜಾರಿ ಕೊಡ್ಲಕ್ಕೆ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವಲಯ ನಿರ್ದೇಶಕ ಪ್ರಮೋದ್ ಕುಮಾರ್ ಬಳ್ಳಮಂಜ, ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುನೀತ್ ಕುಮಾರ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಆಶಾ ಉಮೇಶ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಚಿನ್ ಪೂಜಾರಿ ಹಾಗೂ ಶಿಕ್ಷಕ ಸುಭಾಷ್ ಚಂದ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಸುಮಾರು 80 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಸಮಿತಿಯ ಕೋಶಾಧಿಕಾರಿ ನವೀನ್ ಕೊಡ್ಲಕ್ಕೆ ಅವರು ಪುಸ್ತಕ ವಿತರಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 7 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಯೋಗೀಶ್ ಕಡ್ತಿಲ ಸ್ವಾಗತಿಸಿದರು. ಮಡಂತ್ಯಾರ್ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ರೂಪಾ ನವೀನ್ ಧನ್ಯವಾದ ಸಮರ್ಪಿಸಿದರು. ನಿವೃತ್ತ ಶಿಕ್ಷಕ ಪ್ರವೀಣ್ ದೋಟ ಕಾರ್ಯಕ್ರಮ ನಿರೂಪಿಸಿದರು. ✍️ ವರದಿ: ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here