ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (K.D.C) ನೂತನ ಆಡಳಿತ ಮಂಡಳಿ ರಚನೆ; ಅದ್ಯಕ್ಷರಾಗಿ ಶರೀಫ್ JH ಕಾಜೂರು ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ವಹಾಬ್ ಕೋಶಾದಿಕಾರಿಯಾಗಿ ಸಿದ್ದಿಕ್ ಪಿ.ಎ ಅವಿರೋಧ ಆಯ್ಕೆ

0

ಸ್ವಂತ ಕುಟುಂಬ, ಉದ್ಯೋಗ ಮತ್ತು ಪ್ರವಾಸಿ ಜೀವನದ ಜವಾಬ್ದಾರಿಗಳ ನಡುವೆ ಬಿಡುವಿನ ಸಮಯವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟು, ಕಾಜೂರಿನ ಒಳಿತಿಗಾಗಿ ವಿವಿಧ ಯೋಜನೆಗಳು ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ತಮ್ಮ ನಿಸ್ವಾರ್ಥ ಸೇವೆ ನಿಜವಾಗಿಯೂ ಶ್ಲಾಘನೀಯವಾಗಿದೆ. ಊರಿನ ಬಗ್ಗೆ ಕಾಳಜಿ, ಸಮಾಜದ ಬಗ್ಗೆ ಬದ್ಧತೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸುವ ತಮ್ಮ ಸಂಕಲ್ಪ ಎಲ್ಲರಿಗೂ ಮಾದರಿಯಾಗಿದೆ.

ವಿದೇಶದಲ್ಲಿದ್ದರೂ ತಮ್ಮ ತಾಯ್ನಾಡಿನೊಂದಿಗೆ ನಂಟು ಬೆಳೆಸಿ, ತಮ್ಮ ಊರಿನ ಅಭಿವೃದ್ಧಿಗೆ ಅಗತ್ಯವಾದ ಸಹಾಯ-ಸಹಕಾರಗಳನ್ನು ಒದಗಿಸಲು ಶ್ರಮಿಸುತ್ತಿರುವ ತಮ್ಮಂತಹ ಯುವಕರಿಂದ ಸಮಾಜಕ್ಕೆ ಹೊಸ ಶಕ್ತಿ ಮತ್ತು ಭರವಸೆ ದೊರೆಯುತ್ತಿದೆ. ನಿಮ್ಮ ನೂತನ ಆಡಳಿತ ಮಂಡಳಿಯ ಅವಧಿಯಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಸೇವಾ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸುತ್ತೇವೆ.

ಸಯ್ಯದ್ ಕಾಜೂರು ತಂಗಲ್ ರವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಕೆಡಿಸಿ ಸಮಿತಿಯ ಮಹಾಸಭೆಯು ಮೇ.22 ರಂದು ನಡೆದ ಮಹಾಸಭೆಯಲ್ಲಿ ಕಳೆದ ಸಾಲಿನ ಪದಾಧಿಕಾರಿಗಳು ಎಂದಿನಂತೆ ವರದಿ ಲೆಕ್ಕಪತ್ರ ಹಿತನುಡಿ ಗಳೊಂದಿಗೆ ಸಭೆಯು ನಡೆದಿದ್ದು ಮುಂದಿನ ಸಾಲಿನ ಕಾರ್ಯಕಾರಿ ಸಮಿತಿ ರಚಿಸಲಾಯಿತು

ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜನಾಬ್ ಶರೀಫ್ JH ಕಾಜೂರು ,ಪ್ರದಾನ ಕಾರ್ಯದರ್ಶಿ ಅಬ್ದುಲ್ ವಹಾಬ್ azhari ,ಕೋಶಾದಿಕಾರಿಯಾಗಿ ಸಿದ್ದಿಕ್ PA ,ಕಾರ್ಯ ನಿರತ ಸದಸ್ಯರಾಗಿ ಸಿಕಂದರ್ ಹೆಡ್ಯಾ ಜಾಬಿರ್ ಕಾಜೂರು ,ಲತೀಫ್ PA ,ಮನ್ಸೂರ್ DH,ಸುಹೈಬ್ ಕಾಜೂರು,ನವಾಜ್ ಕಾಜೂರು ,ಮುಹಮ್ಮದ್ ಹಾಶಿಂ ಕಾಜೂರು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಸದಸ್ಯರಾಗಿ ಹನೀಫ್ ಕೆ ಎಂ,ಇಬ್ರಾಹಿಂ ಇಬ್ಬಿ,ಹಾರಿಸ್ JH,ಇಸ್ಮಾಯಿಲ್ ಹಾಜಿ ಮಕ್ಕ ,ಸಿನಾನ್ ಬಹ್ರೈನ್,ಫಾರೂಕ್ JH ,ರಫೀಕ್ ಕಾಜೂರು,ಸಫ್ವಾನ್ ಸಯ್ಯದ್ ಕಾಜೂರು ತಂಗಲ್ ಗೌರವಾಧ್ಯಕ್ಷರಾಗಿಯು ಕೆ ಯು ಮೊಹಮ್ಮದ್ ಸಕಾಫಿ ಅವರನ್ನು ನಿರ್ದೇಶಕರಾಗಿ ಎಂದಿನಂತೆ ಮಹಾಸಭೆಯಲ್ಲಿ ಅವಿರೋಧವಾಗಿ ನೇಮಕಗೊಳಿಸಲಾಯಿತು

LEAVE A REPLY

Please enter your comment!
Please enter your name here