ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದಿಂದ ಇಬ್ಬರು ಸಂತ್ರಸ್ತರಿಗೆ ತಲಾ 10,000 ರೂ. ಧನಸಹಾಯ

0

ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ಮೇ ತಿಂಗಳ ಸೇವಾ ಯೋಜನೆಯ ಧನಸಹಾಯವನ್ನು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳಾಲು ಗ್ರಾಮದ ಮಂಡಾಲು ನಿವಾಸಿ ನೋಣಯ್ಯಗೌಡ ಹಾಗೂ ಆಕಸ್ಮಿಕವಾಗಿ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಂದಬೆಟ್ಟು ಗ್ರಾಮದ ಬರೆಮೇಲು ನಿವಾಸಿ ಭವಿತ್ ಇವರುಗಳಿಗೆ ತಲಾ ರೂ.10,000/-ದಂತೆ ಆರ್ಥಿಕ ಸಹಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಮೋಹನ್ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಸುರೇಶ್ ಕೌಡಂಗೆ, ತಾಲೂಕು ಯುವ ವೇದಿಕೆಯ ಉಪಾಧ್ಯಕ್ಷರಾದ ನಿತಿನ್ ಕಲ್ಮಂಜ ಮತ್ತು ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ , ಸೋಮಂತ್ತಡ್ಕ ಶಾಖಾ ವ್ಯವಸ್ಥಾಪಕರು ಉಮೇಶ್ ಮೈರ್ನೋಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here