







ಕುಕ್ಕೇಡಿ :ಕುಕ್ಕೇಡಿ ಗ್ರಾಮ ಪಂಚಾಯತಿನ ಮಹಿಳಾ ಗ್ರಾಮ ಸಭೆ ಮೇ 26ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಬೃಂದಾವನ ಸಂಜೀವಿನಿ ಮಹಿಳಾ ಒಕ್ಕೂಟದ ಚಂದ್ರಿಕಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಹಿಳಾ ಸಬಲೀಕರಣ ಜಿಲ್ಲಾ ಲಿಂಗ ತಜ್ಞೆ ವಿಶಾಲಾಕ್ಷಿ, ವೇಣೂರು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಧಿಕಾರಿ ಪುಷ್ಪ, ಪೊಲೀಸ್ ಇಲಾಖೆಯ ಪಿ ಎಸ್ ಐ ಓಮನ್, ಇವರು ಸಂಕ್ಷಿಪ್ತವಾದ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ಕುoಞ ಕೆ. ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.









