






ಬೆಳ್ತಂಗಡಿ: ಮುಂಗಾರುಪೂರ್ವ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೇ 27ರ ಬುಧವಾರದಂದು ತಾಲ್ಲೂಕಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್ ನಿಲುಗಡೆಯಾಗಲಿರುವ ಪ್ರದೇಶಗಳು: ಪುಂಜಾಲಕಟ್ಟೆ ಜಂಕ್ಷನ್ ಗುರುವಾಯನಕೆರೆ ಶಕ್ತಿನಗರ ಪಣೆಜಾಲು ಹಳೆಕೋಟೆ ಕಲ್ಕಣಿ ರೆಂಕೆದಗುತ್ತು ಸಂತೆಕಟ್ಟೆ ಜ್ಯೂನಿಯರ್ ಕಾಲೇಜು ಪರಿಸರ ಬೆಳ್ತಂಗಡಿ ಪೇಟೆ ಸುಧೆಮುಗೇರು, ಲಾಯಿಲ ಕಾಶಿಬೆಟ್ಟು, ನಿಗದಿತ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.









