ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಹರೀಶ ಕುಮಾರ್ ಕೆ. ಅವರಿಗೆ ಪಿಎಚ್‌ಡಿ ಪದವಿ ಪ್ರದಾನ

0

ಮಂಗಳೂರು: ಬಳ್ಳಮಂಜ ನಿವಾಸಿ ಹರೀಶ ಕುಮಾರ್ ಕೆ. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್‌ಡಿ) ಪದವಿ ನೀಡಿ ಗೌರವಿಸಿದೆ.

ಅವರು ಮಂಡಿಸಿದ ‘ಡೋಪ್ಡ್ ಟಿನ್ ಆಕ್ಸೈಡ್ ಥಿನ್ ಫಿಲ್ಮ್ಸ್ ಗ್ರೋನ್ ಬೈ ಪಲ್ಸಡ್ ಲೇಸರ್ ಡೆಪೊಸಿಷನ್ ಫಾರ್ ಸೂಪರ್ ಕೆಪಾಸಿಟರ್ ಅಪ್ಲಿಕೇಶನ್ಸ್’ (Doped Tin Oxide Thin Films Grown by Pulsed Laser Deposition for Supercapacitor Applications) ಎಂಬ ಸಂಶೋಧನಾ ಪ್ರಬಂಧಕ್ಕೆ ಈ ಉನ್ನತ ಪದವಿ ಲಭಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಹೆಸರಾಂತ ಪ್ರಾಧ್ಯಾಪಕ ಡಾ. ಧರ್ಮಪ್ರಕಾಶ್ ಎಸ್. ಎಂ. ಇವರು ಈ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು.

ಡಾ. ಹರೀಶ ಕುಮಾರ್ ಅವರು ಬಳ್ಳಮಂಜದ ಕೃಷ್ಣಕುಮಾರ್ ಎಂ. ಎಸ್. ಹಾಗೂ ಗೌರಿ ಪಿ. ದಂಪತಿಯ ಪುತ್ರರಾಗಿದ್ದಾರೆ. ಪುಂಜಾಲಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜು, ಉಜಿರೆಯ ಎಸ್.ಡಿ.ಎಂ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಇವರು ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾಕ್ಟರೇಟ್ ಪದವಿ ಪಡೆದ ಹರೀಶ ಕುಮಾರ್ ಅವರ ಸಾಧನೆಗೆ ಸ್ಥಳೀಯರು ಹಾಗೂ ಶೈಕ್ಷಣಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here