







ಧರ್ಮಸ್ಥಳ: ಇಲ್ಲಿನ ಗೋದಾವರಿ ವಸತಿಗೃಹದ ಬಳಿಯ ಪಾರ್ಕಿಂಗ್ ಪ್ರದೇಶದಲ್ಲಿ ಅಪರಿಚಿತ ಗಂಡಸೊಬ್ಬರ ಮೃತದೇಹ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.ಘಟನೆಯ ಮೇ. 20 ರಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಗೋದಾವರಿ ವಸತಿಗೃಹದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಮೃತರು ಯಾವುದೋ ಕಾಯಿಲೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.


ಮೃತರ ಚಹರೆ ಹಾಗೂ ಗುರುತುಗಳು:ವಯಸ್ಸು: ಸುಮಾರು 50-55 ವರ್ಷಎತ್ತರ: 5.4 ಅಡಿಶರೀರ: ದೃಢಕಾಯ ಹೊಂದಿದ್ದಾರೆಮೈಬಣ್ಣ: ಎಣ್ಣೆಕಪ್ಪುಮುಖ: ದುಂಡು ಮುಖ, ತಲೆಯಲ್ಲಿ ಕೂದಲಿದ್ದು, ಮುಖದ ಗಡ್ಡ-ಮೀಸೆಯನ್ನು ಬೋಳಿಸಲಾಗಿದೆ.ವಿಶೇಷ ಗುರುತು: ಎಡಕಾಲಿನ ತೊಡೆಯಲ್ಲಿ ಕಪ್ಪು ಮಚ್ಚೆಯ ಗುರುತಿದೆ.ಧರಿಸಿದ್ದ ಬಟ್ಟೆಗಳು: ಮೈಮೇಲೆ ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್, ನೀಲಿ, ಕಂದು ಮತ್ತು ಬಿಳಿ ಬಣ್ಣದ ಚೌಕಳಿ (ಚೆಕ್ಸ್) ಇರುವ ಲುಂಗಿ ಹಾಗೂ ‘POOMEX’ ಎಂದು ಬರೆದಿರುವ ಒಳಚಡ್ಡಿ ಧರಿಸಿರುತ್ತಾರೆ.
ಮೃತರ ವಾರಸುದಾರರು ಅಥವಾ ಇವರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರು (PSI) ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.ಸಂಪರ್ಕಿಸಬೇಕಾದ ಸಂಖ್ಯೆಗಳು:ಧರ್ಮಸ್ಥಳ ಪೊಲೀಸ್ ಠಾಣೆ: 08256-277253ಪಿ.ಎಸ್.ಐ ಧರ್ಮಸ್ಥಳ (PSI): 7795424204, 8277986449ಸಿ.ಪಿ.ಐ ಬೆಳ್ತಂಗಡಿ (CPI): 9480805336ಜಿಲ್ಲಾ ನಿಯಂತ್ರಣ ಕೊಠಡಿ (Dist Control): 0824-2220500ಇ-ಮೇಲ್ ಐಡಿ: [email protected]









