







ಬೆಳ್ತಂಗಡಿ: ರೆಖ್ಯ ಗ್ರಾಮದ ದೇವಸದ ಸಂಬಂಧಿಕರ ಮನೆಗೆ ಆಗಮಿಸಿದ್ದ ನೆಲ್ಯಾಡಿ ಪಾಲೇತ್ತಾಡಿ ನಿವಾಸಿ ಅಶ್ವಿತ್ ಕುಮಾರ್ (37) ಅವರು ಮೇ 17ರಂದು ಸಂಜೆ 4.15ರ ಬಳಿಕ ನಾಪತ್ತೆಯಾಗಿದ್ದರು.


ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಸ್ಥಳೀಯರು, ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಬೆಳ್ತಂಗಡಿ ತುರ್ತು ಸ್ಪಂದನಾ ಘಟಕದ ಸದಸ್ಯರು ಜಂಟಿಯಾಗಿ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದರು.
ಎರಡು ದಿನಗಳ ಕಾಲ ಹುಡುಕಾಟ ಮುಂದುವರಿದ ಬಳಿಕ, ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಕೊಕ್ಕೋ ತೋಟದಲ್ಲಿ ಅಶ್ವಿತ್ ಕುಮಾರ್ ಅವರು ಏನೂ ಅರಿಯದ ಸ್ಥಿತಿಯಲ್ಲಿ ನಿಂತಿರುವುದು ಪತ್ತೆಯಾಯಿತು.ತಕ್ಷಣ ಅವರನ್ನು ರಕ್ಷಿಸಿ ಆರೋಗ್ಯ ತಪಾಸಣೆಗಾಗಿ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.









