ತಣ್ಣೀರುಪಂಥ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

0

ಗ್ರಾಮ ಪಂಚಾಯತ್ ತಣ್ಣೀರು ಪಂಥ ಅರಿವು ಕೇಂದ್ರ ಗ್ರಂಥಾಲಯ ತಣ್ಣೀರು ಪಂತ ಇಲ್ಲಿ,”ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ” ಸರಕಾರದ ಆದೇಶದಂತೆ ದಿನಾಂಕ 04/05/2026 ರಿಂದ ದಿನಾಂಕ 11/05/2026 ವರೆಗೆ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೇ.12 ರಂದು ನಡೆಯಿತು.

ಕಾರ್ಯಕ್ರಮವು ಮಕ್ಕಳ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಕಾರ್ಯ ಕ್ರಮಕ್ಕೆ ಸುಮ್ಮಯ್ಯ ಜೆ, ಹೆಚ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಆನಂದ್ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಮೇಲ್ವಿಚಾರಕಿ ಸ್ವಾಗತ ನೀಡಿದರು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನೆ ಹೇಳಿ ಶಿಬಿರದ ಪ್ರಯೋಜನವನ್ನು ಮಕ್ಕಳಿಗೆ ತಿಳಿಸಿ ನಿಮ್ಮ ಮುಂದಿನ ಜೀವನದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಲು ಈ ಶಿಬಿರವು ನಿಮಗೆ ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸಿದರು.

ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ತಮ್ಮ ತಮ್ಮ ಪ್ರತಿಭೆಯನ್ನು ಹಾಡು ನಾಟಕ ನೃತ್ಯದ ಮೂಲಕ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ 25 ಮಕ್ಕಳಿಗೆ ಪ್ರಮಾಣ ಪತ್ರ ಪೆನ್ನು ಪುಸ್ತಕ ರಬ್ಬರ್ ಪೆನ್ಸಿಲ್ ಕಂಪಾಸ್ ಬಾಕ್ಸ್ ನೀಡಿ ಅಭಿನಂದಿಸಲಾಯಿತು.ಹಾಗೂ ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಲ್ಲರಿಗೂ ಗೌರವ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಉಪಹಾರದ ವ್ಯವಸ್ಥೆಯನ್ನು ಪಂಚಾಯತ್ ವತಿಯಿಂದ ಮಾಡಲಾಯಿತು ಇದರೊಂದಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ನೇತ್ರಾವತಿ ಹೋಟೆಲ್ ಮಾಲೀಕರು ಹಣ್ಣು ಹಂಪಲು ನೀಡಿದರು. ಹಾಗೆ 9 ದಿನ ನಡೆದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಪಂಚಾಯತ್ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಹಾಗೂ ಎಲ್ಲಾ ಮಕ್ಕಳ ಪೋಷಕರಿಗೂ ಹಾಗೂ ಮಕ್ಕಳಿಗೆ ಮೇಲ್ವಿಚಾರಕಿ ಧನ್ಯವಾದ ನೀಡಿ . ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here