







ಶ್ರೀ ಗುರುರಾಯಣಸ್ವಾಮಿ ಸೇವಾ ಸಂಘದ ವತಿಯಿಂದ ಮೇ.16 ರಂದು ನಡೆದ ಮಾಸಿಕ ಸಭೆಯಲ್ಲಿ ಇತ್ತೀಚೆಗೆ ಅಭೂತಪೂರ್ವ ಬ್ರಹ್ಮಕಲಶ ನಡೆದ ಮರೋಡಿಯ ಬ್ರಹ್ಮ ಬೈದರ್ಕಳ ಗರಡಿಗೆ ಬೆಳ್ತಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಂಘದ ವತಿಯಿಂದ ಅಧ್ಯಕ್ಷ ಜೈ ವಿಕ್ರಮ ಕಲ್ಲಾಪು ಮರೋಡಿ ಬ್ರಹ್ಮ ಬೈದರ್ಕಳ ಗರಡಿಯ ಪದಾಧಿಕಾರಿ ನಾರಾಯಣ ಪೂಜಾರಿ ಉಚ್ಚುರ್ ಅವರ ಮುಖಾಂತರ ದೇಣಿಗೆಯನ್ನು ಹಸ್ತಾಂತರಿಸಿದರು.


ಮಾಜಿ ಅಧ್ಯಕ್ಷರುಗಳಾದ ಪೀತಾಂಬರ ಹೇರಾಜೆ, ಯೋಗೇಶ್ ಕುಮಾರ್ ನಡಕ್ಕರ, ಜಯರಾಮ್ ಬಂಗೇರ ಹೇರಾಜೆ, ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ನಿತೇಶ್ ಕೋಟ್ಯಾನ್ ವೇಣೂರು, ಕೋಶಾಧಿಕಾರಿ ಪ್ರಶಾಂತ್ ಮೆಚ್ಚಿನ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರ್ ಮಹಿಳಾ ಅಧ್ಯಕ್ಷೆ ಸುಮತಿ ಪ್ರಮೋದ್ ಉಪಸ್ಥಿತರಿದ್ದರು.









