ಉಜಿರೆ ಎಸ್ ಡಿ ಎಂ ಇಂಜಿನೀಯರಿಂಗ್ ಕಾಲೇಜು ವಾರ್ಷಿಕೋತ್ಸವ; ಧರ್ಮ ಮತ್ತು ಶಿಕ್ಷಣವೇ ಬದುಕಿಗೆ ಭದ್ರ ಬುನಾದಿ :ಕಿಶೋರ್ ಆಳ್ವ

0

ಉಜಿರೆ: ಚತುರ್ದಾನ ಪರಂಪರೆಯ ಧರ್ಮಸ್ಥಳ ಕ್ಷೇತ್ರದ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವುದೆಂದರೆ ಅದು ಹೆತ್ತವರ ಪೂರ್ವಾರ್ಜಿತ ಪುಣ್ಯ ಫಲ . ಅನ್ನ ,ವಿದ್ಯೆ,ಅರೋಗ್ಯ,ಅಭಯದಾನದ ಕ್ಷೇತ್ರದ ನೆರಳಲ್ಲಿ ಶಿಕ್ಷಣ ಪಡೆಯುವುದು ವಿದ್ಯಾರ್ಥಿಯ ಬದುಕಿನ ಭದ್ರ ಬುನಾದಿಯಾಗುವುದು. ಸತ್ಯ,ಸೇವೆ ಮತ್ತು ಉತ್ತಮ ಗುಣನಡತೆಯನ್ನು ಮೈಗೂಡಿಸಿಕೊಂಡು ಚಾರಿತ್ರ್ಯವಂತರಾಗಿ ಭವಿಷ್ಯವನ್ನು ರೂಪಿಸಿಕೊಳ್ಳಿ. ಕುತೂಹಲದ ಅಧ್ಯಯನದಿಂದ ಅನುಭವ ,ಜ್ಞಾನ ಗಳಿಸಿ ದೇಶದ ಭವಿಷ್ಯ ರೂಪಿಸುವ ಸರ್ವರಕ್ಷಕನಾಗಿ ಪದವಿಯೊಂದಿಗೆ ಹೊರಬನ್ನಿ ಎಂದು ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ,ಆಡಳಿತ ನಿರ್ದೇಶಕ ಕಿಶೋರ್ ಆಳ್ವ ನುಡಿದರು.

ಅವರು ಮೇ 12ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅವರು ಡಾ! ರಜತಾ ಶೆಟ್ಟಿ ಸಂಪಾದಕತ್ವದಲ್ಲಿ ಹೊರತಂದ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿ 1933ರಲ್ಲಿ ಮಂಜಯ್ಯ ಹೆಗ್ಗಡೆಯವರಿಂದ ಸಿದ್ದವನದಲ್ಲಿ ಪ್ರಾರಂಭಗೊಂಡ ಶ್ರೀ ಮಂಜುನಾಥ ಸ್ವಾಮಿಯ ಹೆಸರಿನ ಶಿಕ್ಷಣ ಸಂಸ್ಥೆ ಬೆಳೆದುಬಂದ ರೀತಿ ಸ್ಮರಣೀಯವಾದುದು.

ಗ್ರಾಮೀಣ ಪ್ರದೇಶದ ವಿ ದ್ಯಾರ್ಥಿಗಳಿಗೆ ನಗರ ಪ್ರದೇಶದ ಶಿಕ್ಷಣ ಸೌಲಭ್ಯಗಳನ್ನು ಕಲ್ಪಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಅನುಕೂಲ , ಅವಕಾಶಗಳನ್ನು ಒದಗಿಸಿ ವ್ಯಕ್ತಿತ್ವರೂಪಿಸಿ ,ಉತ್ತಮ ಫಲಿತಾಂಶ ಗಳಿಕೆಗೆ ಆಡಳಿತ ಮಂಡಳಿ,ಉಪನ್ಯಾಸಕರ ಪರಿಶ್ರಮ,ಸಾಧನೆ ಗಮನಾರ್ಹವಾದುದು. ಮೈಸೂರಿನಲ್ಲಿ ಎಂ ಬಿ ಎ ಅಧ್ಯಯನಕ್ಕೆ ಸೇರ್ಪಡೆಗೊಡು ಶಕ್ತಿಯಿಂದ ಯುಕ್ತಿಯನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಕ್ಷಣ ಸಂಸ್ಥೆ ವತಿಯಿಂದ ಮುಖ್ಯ ಅತಿಥಿ ಕಿಶೋರ್ ಆಳ್ವ ಅವರನ್ನು ಗೌರವಿಸಲಾಯಿತು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್ ಮತ್ತು ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ , ಕ್ರೀಡೆ,ಸಾಂಸ್ಕೃತಿಕ ಕ್ಷೇತ್ರದ ವಿಶೇಷ ಸಾಧಕರನ್ನು ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜು ಪ್ರಾಚಾರ್ಯ ಡಾ!ಅಶೋಕ್ ಕುಮಾರ್ ಟಿ ಅವರು ಕಾಲೇಜಿನ ವಾರ್ಷಿಕ ಸಾಧನೆಯ ವರದಿಯನ್ನು ಮಂಡಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಸಂಯೋಜಕ ಡಾ!ಸಂದೀಪ್ ಸ್ವಾಗತಿಸಿ,ಅನನ್ಯ ರಾಜ್ ವಂದಿಸಿದರು.ಉಪನ್ಯಾಸಕ ಡಾ!ರವೀಶ್ ಪಡುಮಲೆ ಮುಖ್ಯ ಅತಿಥಿಗಳನ್ನು ಪರಿಚಯಿಸಿ, ವಿದ್ಯಾ ಕೆ. ವಿಶೇಷ ಸಾಧಕರ ವಿವರ ನೀಡಿದರು. ಅನಿಶ್ ಮತ್ತು ಪಂಚಮಿ ಕಾರ್ಯಕ್ರಮ ನಿರೂಪಿಸಿದರು . ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಮನರಂಜನೆ ಹಾಗು ಯಕ್ಷಗಾನ ಪ್ರದರ್ಶನ ನಡೆಯಿತು

LEAVE A REPLY

Please enter your comment!
Please enter your name here