






ಬೆಳ್ತಂಗಡಿ: ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಇದೆ, ತುರ್ತು ಸೇವೆಗಳಿಗೆ ಇರುವ ಅಂಬ್ಲುಲೆನ್ಸ್ ಗಳಿಗೆ ಡೀಸೆಲ್ ಇಲ್ಲ, ಆಸ್ಪತ್ರೆಯಲ್ಲಿ ಗ್ಲೌಸ್, ಮಾಸ್ಕ್, ಕ್ಯಾನೂಲಾ, NS ಡ್ರಿಪ್ಸ್ ಸೇರಿದಂತೆ ವೈದ್ಯಕೀಯ ಸೌಕರ್ಯದ ಅಭಾವ ಇದೆ, ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ ಎಂದು ಮೇ.08 ರಂದು ತಾಲೂಕಿನ ಎಸ್.ಡಿ.ಪಿ.ಐ ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿದ್ದರು.


ಈ ಹಿನ್ನೆಲೆ ಮೇ.11 ರಂದು ತಾಲೂಕು ಆಸ್ಪತ್ರೆಗೆ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಹಾಗೂ ವೈದ್ಯರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಎಸ್.ಡಿ.ಪಿ.ಐ ಬೆಳ್ತಂಗಡಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಕ್ಷೇತ್ರ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ, ಕೋಶಾಧಿಕಾರಿ ಸ್ವಾಲಿಹ್ ಮದ್ದಡ್ಕ, ಅಶ್ರಫ್ ಕಟ್ಟೆ, ನಗರ ಸಮಿತಿ ಅಧ್ಯಕ್ಷ ರಿಯಾಝ್ ಬೆಳ್ತಂಗಡಿ, ಉಜಿರೆ ಬ್ಲಾಕ್ ಅಧ್ಯಕ್ಷ ಸಲೀಂ ಲಾಯಿಲ, ರಶೀದ್ ಲಾಯಿಲ, ಸ್ವಾದಿಕ್ ಲಾಯಿಲ ಉಪಸ್ಥಿತರಿದ್ದಾರೆ.









