ಬೆಳ್ತಂಗಡಿ : ಮೆಸ್ಕಾಂ ಪಕ್ಕದ ಅಕ್ರಮ ಕ್ಯಾಂಟೀನ್ ನಲ್ಲಿ ಅಕ್ರಮ ವೇಶ್ಯವಾಟಿಕೆ ದಂಧೆ ಪೊಲೀಸರಿಂದ ದಾಳಿ- ಪ್ರಕರಣ ದಾಖಲು- ಮೂವರು ವಶಕ್ಕೆ

0

ಬೆಳ್ತಂಗಡಿ: ಮೆಸ್ಕಾಂ ಕಚೇರಿ ಬಳಿ ಇರುವ ಅಕ್ರಮ ಕ್ಯಾಂಟೀನ್ ನಲ್ಲಿ ಅಕ್ರಮ ವೇಶ್ಯಾವಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ಎ.10 ರಂದು ಮಧ್ಯಾಹ್ನ 3 ಗಂಟೆಗೆ ದಾಳಿ ನಡೆಸಿದ ಘಟನೆ ನಡೆದಿದೆ.ಕಳೆದ ಸುಮಾರು 20 ವರ್ಷಗಳಿಂದ ಪೊಯ್ಯಗುಡ್ಡೆ ನಿವಾಸಿ ಸುಂದರ್ ಶೆಟ್ಟಿ ಎಂಬವರು ಕ್ಯಾಂಟಿನ್‌ ನಡೆಸುತ್ತಿದ್ದರು .

ಈ ಕ್ಯಾಂಟಿನ್ ಭಾನುವಾರ ಮಾತ್ರ ರಜೆ ಇದ್ದು, ಈ ಸಮಯದಲ್ಲಿ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ ಕ್ಯಾಂಟಿನ್ ಒಳಗಡೆ ಬೆಡ್ ರೂಂ, ಶೌಚಾಲಯ ವ್ಯವಸ್ಥೆ ಮಾಡಿಕೊಂಡು ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದರು.ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ವೇಶ್ಯಾವಟಿಕೆ ಪ್ರಕರಣ ಬೆಳಕಿಗೆ ಬಂದಿದ್ದು, ಕ್ಯಾಂಟಿನ್ ಒಳಗಡೆ ಮಾಲೀಕ ಸುಂದರ್ ಶೆಟ್ಟಿ(55), ನಾವೂರು ನಿವಾಸಿ ಹುಸ್ಮಾನ್(38), ತಣ್ಣಿರುಪಂತ ಗ್ರಾಮದ ಕಲ್ಲೇರಿ ನಿವಾಸಿ ಹೈದಾ‌ರ್(45) ಎಂಬ ಮೂವರನ್ನು ಬಂಧಿಸಿದ್ದಾರೆ.29 ವರ್ಷದ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ದಾಳಿ ವೇಳೆ ಮೊಬೈಲ್ ಫೋನ್, ಹಣ, ನಿರೋಧ ಗಳು ಪತ್ತೆಯಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ .ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟ‌ರ್ ಸಿಕಂದ‌ರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here