ಗುರುವಾಯನಕೆರೆ ಶಕ್ತಿನಗರ ಬಳಿ ಭೀಕರ ಅಪಘಾತ- ಬೈಕ್ ಸವಾರ ಗಂಭೀರ ಗಾಯ

0

ಗುರುವಾಯನಕೆರೆ- ಶಕ್ತಿನಗರ ವೃತ್ತ ಬಳಿ ಕಾರ್ಕಳ – ಬದ್ಯಾರ್ ಜಂಕ್ಷನ್ ಕಡೆಯಿಂದ ಬರುತ್ತಿದ್ದ ಬೈಕ್ ಸಂಖ್ಯೆ KA20E T 391 ಬೈಕ್ ಸವಾರ ನಾಗರಾಜ್ (21 ವ ) ಇವರು ಕಾರ್ಕಳದವರಾಗಿದ್ದು, ಗುರುವಾಯಕೆರೆಯಲ್ಲಿ ದೊಡ್ಡಮ್ಮನ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಈ ಸಮಯದಲ್ಲಿ ಗುರುವಾಯನಕೆರೆ ಕಡೆಯಿಂದ ಬರುತ್ತಿದ್ದ ಪಿಕ ಅಪ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪ್ರತೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here