







ಬೆಳ್ತಂಗಡಿ: ತಾಲ್ಲೂಕಿನ ಸವಣಾಲು ಗ್ರಾಮದ ಕಣ್ಣಾಜೆ ಗೇರು ಬೀಜದ ಕಾರ್ಖಾನೆ ಸಮೀಪ ಮೇ. 5 ರಂದು ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.


ಕಂಡುಬಂದ ಶವವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಕಾರ್ಖಾನೆಯ ಸಮೀಪದ ನಿರ್ಜನ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವು ಕೊಳೆತ ಕಾರಣ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ.
ಮೇ 05 ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಸ್ಥಳೀಯರು ನೋಡಿ ತಕ್ಷಣ ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಮಹಜರು ನಡೆಸಿದ್ದು ಇದೀಗ ಫಾರೆನ್ಸಿಕ್ ತಂಡದವರು ಬರಲು ಕಾಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.









