ಬೇಸಿಗೆ ಶಿಬಿರಗಳಿಂದ ಮಕ್ಕಳ ದೈಹಿಕ,ಬೌದ್ಧಿಕ ವಿಕಸನ : ಡಾ |ಪಿ.ಜಿ.ಆರ್ ಸಿಂಧ್ಯಾ

0

ಉಜಿರೆ: ಇಂದಿನ ಮಕ್ಕಳು ರಜೆ,ಬೇಸಿಗೆ ಶಿಬಿರಗಳಲ್ಲಿ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕ್ರಿಯಾಶೀಲರಾಗಬೇಕು. ಮೊಬೈಲ್ ಗೀಳಿನಿಂದ ಹೊರಬರಲು ಬೇಸಿಗೆ ಶಿಬಿರಗಳು ಪೂರಕ. ಶಿಬಿರಗಳು ಮಕ್ಕಳ ದೈಹಿಕ, ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ . ಯೋಗ ಶ್ರೇಷ್ಠ ಸಂಪತ್ತು ಎಂದು ಮಾಜಿ ಸಚಿವ , ಭಾರತ ಸ್ಕೌಟ್ಸ್ – ಗೈಡ್ ನ ಮುಖ್ಯ ಆಯುಕ್ತ ಡಾ!ಪಿ ಜಿ ಆರ್ ಸಿಂಧ್ಯಾ ಹೇಳಿದರು.

ಅವರು ಮೇ 4 ರಂದು ಉಜಿರೆಯ ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ರತ್ನಮ್ಮ ಹೆಗ್ಗಡೆ ಸಭಾಭವನದಲ್ಲಿ ರಾಜ್ಯ ಮಟ್ಟದ ಪ್ರಕೃತಿ ಚಿಕಿತ್ಸೆ,ಯೋಗ ಹಾಗೂ ಪೌಷ್ಠಿಕ ಆಹಾರ ಕುರಿತು 5 ದಿನಗಳ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳೇ ದೇಶದ ಅಸ್ತಿ.ಉತ್ತಮ ಸಂಸ್ಕಾರ ಜೀವನದ ಭಾಗ್ಯ. ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ಸಮಯ ಕಳೆಯದೆ ಅತ್ಯಂತ ಅಮೂಲ್ಯವಾದ ಸಮಯದಲ್ಲಿ ತಂದೆ ತಾಯಿಯರ ಅಪೇಕ್ಷೆಯಂತೆ ಪ್ರಕೃತಿ ಚಿಕಿತ್ಸೆ,ಯೋಗ ಮತ್ತು ಪೌಷ್ಟಿಕ ಆಹಾರದ ಮೂಲ ತತ್ವವನ್ನು ತಿಳಿದುಕೊಂಡು ತಾಳ್ಮೆ, ಸಮಯಪ್ರಜ್ಞೆ, ವಿನಯಶೀಲತೆ, ದೇವರಲ್ಲಿ ನಂಬಿಕೆ , ಜೀವನದಲ್ಲಿ ಶಿಸ್ತು,ಸೇವಾಮನೋಭಾವ ಅಳವಡಿಸಿಕೊಂಡು ಪರಿವರ್ತನೆ ಹೊಂದಬೇಕು .ಯೋಗಕ್ಕೆ ತಳಹದಿಯಾದ ಮಿತ ಆಹಾರ ಸೇವನೆ,ವ್ಯಾಯಾಮ,ಶುಚಿತ್ವ,ಆಹಾರದ ಸಂರಕ್ಷಣೆಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಶಾಂತ್ ಶೆಟ್ಟಿ ಮಾತನಾಡಿ ಯುವಕ ಹಾಳಾದರೆ ದೇಶ ಹಾಳಾಗುತ್ತದೆ. ಮಕ್ಕಳಿಗೆ ಬುದ್ಧಿಶಕ್ತಿ ಬದಲಿಸುವ ಸ್ಕೌಟ್ಸ್,ಗೈಡ್ಸ್ ಅತ್ಯವಶ್ಯ. ಮಕ್ಕಳನ್ನು ಪ್ರೀತಿಯಿಂದ ಕೆಟ್ಟ ಚಟಗಳಿಂದ ಮುಕ್ತಗೊಳಿಸಬಹುದು. ಆಡಳಿತ ಮಂಡಳಿ ಅನುಮತಿಯಿಂದ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಿಸಲು ಚಿಂತಿಸಲಾಗುವುದು ಎಂದರು. ಶಿಬಿರದ ನಿರ್ದೇಶಕ ಡಾ| ರವಿ ಎಂ ಎನ್ ಶಿಬಿರದ ರೂಪು ರೇಷೆಗಳ ಕುರಿತು ಮಾಹಿತಿ ನೀಡಿದರು.

ಸ್ಕೌಟ್ಸ್ -ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ್ ಭಟ್,ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ವಿಠ್ಠಲ ಶೆಟ್ಟಿ,ಜಿಲ್ಲಾ ಸಹಾಯಕ ಆಯುಕ್ತ ಬಿ.ಸೋಮಶೇಖರ್ ಶೆಟ್ಟಿ, , ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here