






ಶಿಶಿಲ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರ, ಮೀನುಗಳ ಪಾಲಕ ಎಂದೇ ಖ್ಯಾತಿಯಾಗಿರುವ ಶಿಶಿಲೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಮೇ 2ರಂದು (ಮೇಷ ಮಾಸ 18) ‘ಗೊನೆ ಮುಹೂರ್ತ’ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುನಿಲ್ ಗೋಖಲೆ ಅವರ ಉಪಸ್ಥಿತಿಯಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕ ರಾಮ ಕಾರಂತರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೊನೆ ಕಡಿಯುವ ಮುಹೂರ್ತವನ್ನು ನೆರವೇರಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಧರ ರಾವ್, ನಾರಾಯಣ ಸುವರ್ಣ, ರಮೇಶ ಗೌಡ, ಸುಂದರ ಗೌಡ ಅವರು ಪಾಲ್ಗೊಂಡಿದ್ದರು. ಕ್ಷೇತ್ರದ ದೈವ ಪರಿಚಾರಕರಾದ ಬಾಲಕೃಷ್ಣ ಗೌಡ ಗಾಣದಕೊಟ್ಟಿಗೆ ಹಾಗೂ ಸುರೇಶ್ ಗೌಡ ಅಂಬೆಲ್ತಡ್ಕ ಅವರೊಂದಿಗೆ ಗ್ರಾಮದ ಪ್ರಮುಖರಾದ ಯೋಗೀಶ್ ದಾಮ್ಲೆ, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.









