







ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 993 ರೂಪಾಯಿ ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಜೊತೆಗೆ ಕೇಂದ್ರದ ಬಿಜೆಪಿ ಸರ್ಕಾರ ಚೆಲ್ಲಾಟವಾಡಲು ಆರಂಭಿಸಿದೆ. ಇದು ಟ್ರೇಲರ್ ಅಷ್ಟೇ.
ಚುನಾವಣಾ ಫಲಿತಾಂಶ ಘೋಷಣೆ ನಂತರ ಸಂಪೂರ್ಣ ಸಿನೆಮಾ ಬಿಡುಗಡೆಯಾಗಲಿದೆ.ಅಚ್ಛೇ ದಿನ್ ಬರಲಿದೆ ಎಂದು ದೇಶದ ಜನರನ್ನು ಮೋಸ ಮಾಡಿ ಗೆದ್ದು ಇದೀಗ ಜನರ ಮೇಲೆ ಬೆಲೆ ಏರಿಕೆ ಮಾಡುವ ಮೂಲಕ ಮತ ನೀಡಿದ ಮತದಾರರ ಮೇಲೆ ಸವಾರಿ ಮಾಡಲು ಹೊರಟಿರುವುದು ಅತ್ಯಂತ ಘೋರ ಅಪರಾಧ. ಏಕಾಏಕಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 993 ರೂಪಾಯಿ ಹೆಚ್ಚಲು ಮಾಡಿರುವುದು ಹಗಲು ದರೋಡೆಯಾಗಿದೆ , ಇದರಿಂದಾಗಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದು , ಬೆಲೆ ಏರಿಕೆಯ ನೇರ ಹೊಡೆತ ಗ್ರಾಹಕರ ಮೇಲೆ ಬೀಳಲಿದೆ.


ಇದು ನರೇಂದ್ರ ಮೋದಿಯವರ ಅಚ್ಛೇದಿನ್ ನ ಸ್ಯಾಂಪಲ್ ಅಷ್ಟೇ. ಚುನಾವಣಾ ಫಲಿತಾಂಶದ ಬಳಿಕ ಪೆಟ್ರೋಲಿಯಂ ಉತ್ಪನ್ನಗಳು , ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಇನ್ನೂ ಹೆಚ್ಚಲಿದೆ. ಬಿಜೆಪಿಯೇತರ ಸರ್ಕಾರಗಳು ಸಣ್ಣಪುಟ್ಟ ಬೆಲೆ ಏರಿಕೆ ಮಾಡಿದರೂ ಬೀದಿಗಿಳಿಯುವ ಬಿಜೆಪಿ ಪಕ್ಷದ ನಾಯಕರು , ಕಾರ್ಯಕರ್ತರು ಮೌನವಾಗಿ ಬೆಲೆ ಏರಿಕೆಯನ್ನು ಸ್ವಾಗತಿಸುತ್ತಿದ್ದಾರೆ ಇದು ಆತ್ಮವಂಚನೆಯಾಗಿದೆ.
ಕೇಂದ್ರ ಸರ್ಕಾರ ತಕ್ಷಣವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ತಡೆಯದಿದ್ದರೆ ಬೀದಿಗಳಿದು ಹೋರಾಟ ನಡೆಸುತ್ತೇವೆ ಎಂದು ಯುವ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ಅಝರ್ ನಾವೂರು ಹೇಳಿದ್ದಾರೆ.









