







ಬೆಳ್ತಂಗಡಿ: ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಸತತ ಐದನೇ ವರ್ಷದ ‘ವಿಷುಕಣಿ 5.0’ ಸಾಂಸ್ಕೃತಿಕ ಸಂಭ್ರಮವು ಇದೇ ಬರುವ ಮೇ 17ರ ಭಾನುವಾರ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರುಗಲಿದೆ.



ಕಾರ್ಯಕ್ರಮದ ಯಶಸ್ಸಿಗಾಗಿ ರೂವಾರಿಗಳಾದ ಶಾಸಕ ಹರೀಶ್ ಪೂಂಜಾ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಗುರುವಾಯನಕೆರೆಯ ಹವ್ಯಕ ಸಭಾಭವನದಲ್ಲಿ ಮೇ.1 ರಂದು ನಡೆಯಿತು.
ಸಮಿತಿಯ ಪ್ರಮುಖರಾದ ಪ್ರಸಾದ್ ಬಿ. ಎಸ್, ಅನಿಲ್ ಅಕ್ಷರ, ಬಾಲಕೃಷ್ಣ ನೈಮಿಷ, ದಿವಿನೇಶ್ ಚಾರ್ಮಾಡಿ ಸೇರಿದಂತೆ ಸಂಘಟನೆಯ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.









